ಸುಳ್ಯ: ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವತಿಯಿಂದ ಅಮರಶ್ರೀ ಸಭಾಂಗಣದಲ್ಲಿ ಯೋಗ ದಿನಾಚರಣೆ ನಡೆಯಿತು. ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಸೇರಿ ಏಕಕಾಲದಲ್ಲಿ ಸುಮಾರು 300 ಜನ ನೆರೆದು ಯೋಗ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ
ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕ ಪ್ರಸಾದ್ ಕೆ ವಿ ಯವರು ಶುಭ ಹಾರೈಸಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನದ ಉಗಮವನ್ನು ಉಲ್ಲೇಖಿಸುತ್ತಾ, ಯೋಗವನ್ನು ವಿಶ್ವಮಾನ್ಯವಾಗುವಂತೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಯೋಗ ದಿನಾಚರಣೆಯ ಅಂಗವಾಗಿ “ವಸುದೈವ ಕುಟುಂಬಕಂ” ನ ಅರ್ಥವನ್ನು ಹೇಳುತ್ತಾ ಯೋಗದಿಂದ ಏಕಾಗ್ರತೆ ಸಾಧಿಸಿ ಹೇಗೆ ಜೀವನ, ವಿದ್ಯಾಭ್ಯಾಸವನ್ನು ಸುಂದರಗೊಳಿಸಬಹುದು ಎಂಬುವುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಟ್ ಆಫ್ ಲಿವಿಂಗ್ ಉಪನ್ಯಾಸಕ ರಾಮಕೃಷ್ಣ ಭಟ್ ಪಿ ವಿದ್ಯಾರ್ಥಿಗಳಿಗೆ ಯೋಗದ ಪ್ರಾಮುಖ್ಯತೆ,ತಮ್ಮ ಜೀವನದಲ್ಲಿ ಯೋಗದ ಅಗತ್ಯತೆ ಬಗ್ಗೆ ಅರಿವು ಮೂಡಿಸಿ ಪ್ರಾಯೋಗಿಕ ಯೋಗಾಭ್ಯಾಸವನ್ನು ಮಾಡಿಸಿ ಯೋಗಾಭ್ಯಾಸದ ಅರಿವು ಮೂಡಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಉಜ್ವಲ್ ಯು ಜೆ ಹಾಗೂ ಎಲ್ಲಾ ಅದ್ಯಾಪಕ ವೃಂದದವರು ಯೋಗದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಯೋಗ ಶಿಕ್ಷಕರಾದ ಭಾಸ್ಕರ ಬೆಳೆಗದ್ದೆ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಿರ್ದೇಶಿಸಿದರು. ಉಪಪ್ರಾಂಶುಪಾಲ ದೀಪಕ್ ವೈ ಆರ್ ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿವರ್ಗ ಭಾಗವಹಿಸಿದ್ದರು.