ಸುಳ್ಯ:ಕೆವಿಜಿ ಅಮರಜ್ಯೋತಿಯಲ್ಲಿ ಕೆವಿಜಿ ಎಜೆ ಸ್ಕಾಲರ್ಷಿಪ್ ಪರೀಕ್ಷೆ ಉದ್ಘಾಟನೆಯನ್ನು ಖ್ಯಾತ ಮಾಜಿ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ಪ್ರಗತಿ ಸಂಸ್ಥೆಯ ಪ್ರೊಪ್ರೈಟರ್ ಮಾದಂಡ ತಿಮ್ಮಯ್ಯ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ನೆರವೇರಿಸಿದರು. ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪರೀಕ್ಷೆಯನ್ನು 27 ಅಕ್ಟೋಬರ್ 2024 ರಂದು ನಡೆಸಲಾಗುವುದು.ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.ಸ್ಕಾಲರ್ಷಿಪ್ ಪರೀಕ್ಷೆಯಲ್ಲಿ
ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಲಾ 5 ವಿದ್ಯಾರ್ಥಿಗಳಂತೆ ಒಟ್ಟು 10ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ.ಅದರ ಒಟ್ಟು ಮೊತ್ತ 15 ಲಕ್ಷಕ್ಕೂ ಮೇಲ್ಪಟ್ಟ ಶುಲ್ಕ ವಿನಾಯಿತಿ ಇರುತ್ತದೆ.ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ಶೇ. 100 ರಷ್ಟು ರಿಯಾಯಿತಿ , ದ್ವಿತೀಯ ಹಾಗೂ ತೃತೀಯ ಬಂದ ವಿದ್ಯಾರ್ಥಿಗಳಿಗೆ
https://kvgcommitteeb.org/kvgajpuc/drkvg/scholarship
ಅರ್ಜಿ ಸಲ್ಲಿಸಲು ಲಿಂಕ್
ಭೋದನಾ ಶುಲ್ಕದಲ್ಲಿ ಶೇ.75%ರಷ್ಟು ರಿಯಾಯಿತಿ, ನಾಲ್ಕನೇ ಮತ್ತು ಐದನೇ ಸ್ಥಾನ ಬಂದ ವಿದ್ಯುರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿಯನ್ನು ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಅವರು ಘೋಷಿಸಿದರು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಕಾಲೇಜಿನ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಎಲ್ಲಾ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.