ಸುಳ್ಯ: ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಎಜೆ ಸ್ಕಾಲರ್ಷಿಪ್ ಪರೀಕ್ಷೆ’ ಏರ್ಪಡಿಸಲಾಗಿದೆ.
ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಈ ಸ್ಕಾಲರ್ಶಿಫ್ ಪರೀಕ್ಷೆಯು ದಿನಾಂಕ 21 ಜನವರಿ 2024ರಂದು ನಡೆಸಲಾಗುವುದು. ಜ.21ರಂದು ಪೂ.10ರಿಂದ 11.30ರ ತನಕ ಪರೀಕ್ಷೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಕೆಳಗೆ ನೀಡಿದ
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದಾಖಲಾತಿ ಮಾಡಿ ಕೊಳ್ಳಬಹುದು. ಪರೀಕ್ಷಾ ದಾಖಲಾತಿ ಆರಂಭಗೊಂಡಿದೆ.
ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಲಾ 5 ವಿದ್ಯಾರ್ಥಿಗಳಂತೆ ಒಟ್ಟು 10 ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ. ಅದರಂತೆ ಒಟ್ಟು 5 ಲಕ್ಷಕ್ಕೂ ಮೇಲ್ಪಟ್ಟ ಶುಲ್ಕ ವಿನಾಯಿತಿ ಇರುತ್ತದೆ.

ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಬಂದ ವಿದ್ಯಾರ್ಥಿಗಳಿಗೆ ಶೇ.100 ವಿನಾಯತಿ, 2 ಮತ್ತು 3 ರಾಂಕ್ ಬಂದವರಿಗೆ ಶೇ.75 ಹಾಗೂ 4 ಮತ್ತು 5 ರಾಂಕ್ ಬಂದವರಿಗೆ ಶೇ 50 ರಷ್ಟು ಬೋಧನಾ ಶುಲ್ಕದಲ್ಲಿ ರಿಯಾಯಿತಿ ದೊರೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ
2024-25ನೇ ಸಾಲಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ದಾಖಲಾತಿ ಆರಂಭಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಬೇಕಾದ ಸಂಖ್ಯೆ-9480589071, 7022463069









