ಸುಳ್ಯ: ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಕರಿಯರ್ ಗೈಡೆನ್ಸ್ ಸೆಲ್ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಎನ್ ಡಿ ಎ ಕಾರ್ಯವೈಖರಿ ಮತ್ತು ಉಪಯುಕ್ತತೆಯ ಮಾಹಿತಿ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ ಸೇನಾಧಿಕಾರಿ ಲೆಫ್ಟಿಂನೆಂಟ್ ಕರ್ನಲ್ ಪಿ ವಿ ಚಾಕೋ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಎನ್ ಡಿ ಎ ಇಂದ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ಸಹಕಾರಿಯಾಗುತ್ತದೆ. ಎಂಬುದನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ ಅವರು ಸಂಪನ್ಮೂಲ ವ್ಯಕ್ತಿ ಲೆಫ್ಟಿಂನೆಂಟ್ ಕರ್ನಲ್ ಪಿ ವಿ ಚಾಕೋರವರನ್ನು ಸನ್ಮಾನಿಸಿ ಮಾತನಾಡಿ ಜೆಇಇ/ನೀಟ್/ಸಿಇಟಿ ಜೊತೆಗೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್, ಕೆವಿಜಿ ಅಮರಜ್ಯೋತಿಯ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಕೆವಿಜಿ ಐಪಿಎಸ್ ನ ಪ್ರಾಂಶುಪಾಲರಾದ ಅರುಣ್ ಕುಮಾರ್ ರವರು ಹಾಗೂ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಭಾಗವಹಿಸಿದ್ದರು. ಮನಸ್ವಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ಖಲೀದ ನೂಹ ಸ್ವಾಗತಿಸಿ ತನ್ವಿ ಕಾರ್ಯಕ್ರಮ ನಿರೂಪಿಸಿದರು. ಖುಷಿ ಅತಿಥಿಗಳ ಪರಿಚಯ ಮಾಡಿದರು. ಎನ್ ಡಿ ಎ ಪ್ರಮುಖ ಅಂಶಗಳನ್ನು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಭವ್ಯ ವಿವರಿಸಿದರು. ವಿದ್ಯಾರ್ಥಿ ನಿತಿನ್ ಥೋಮಸ್ ವಂದಿಸಿದರು.