ಸುಳ್ಯ: ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ
ಶ್ರೀನಿವಾಸ ರಾಮಾನುಜನ್ ಅವರ ಹುಟ್ಟು ಹಬ್ಬದ ಸವಿ ನೆನಪಾದ ಗಣಿತ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಸಿಂಚನ ಸ್ವಾಗತ ಕೋರಿ ವಂದನಾರ್ಪಣೆ ಅರ್ಪಿಸಿದರು.ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಗಣಿತ ವಸ್ತು ಸಂಗ್ರಹಾಲಯವನ್ನು
ಪ್ರದರ್ಶಿಸಿದರು.ಹಾಗೂ ಗಣಿತ ವಿಷಯವು ಎಲ್ಲಾ ವಿಷಯದಲ್ಲಿಯೂ ಪ್ರಾಮುಖ್ಯತೆ ಇದೆ ಎಂಬುದರ ಬಗ್ಗೆ ಅರ್ಥ ಪೂರ್ಣವಾಗಿ ವಿಷಯವನ್ನು ಮನದಟ್ಟು ಮಾಡಿಸಿದರು.ಗಣಿತದ ಉಪನ್ಯಾಸಕರಾದ ದೀಪಕ್
ವೈ ಆರ್ ಅವರು ರಾಷ್ಟ್ರಿಯ ಗಣಿತ ದಿನಾಚರಣೆಯ ಮಹತ್ವದ ಬಗ್ಗೆ ಮಕ್ಕಳಿಗೆ ವಿವರಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿ ಇ ಒ ಡಾ. ಉಜ್ವಲ್ ಯು ಜೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದಾ ರಾಮಚಂದ್ರ ಮತ್ತು ಭೋದಕ ಸಿಬ್ಬಂದಿಗಳು ಉಪಸ್ಥಿತರಿದ್ದರು.












