
ಸುಳ್ಯ: ಅಮರ ತರಂಗ ನಾಟಕ ಸಂಘದ ಪದಗ್ರಹಣ, ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ನ.20 ರಂದು
ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಹಾಗು ರಂಗ ನಿರ್ದೇಶಕ ತುಕಾರಾಮ ಯೇನೆಕಲ್ಲು ಉದ್ಘಾಟಿಸಿದರು. ಎ.ಕೆ .ಹಿಮಕರ್ ಅವರು ಬರೆದ ನಾಟಕ ‘ಅಮರ ಸಮರ ನಾಯಕ- ಕೆದಂಬಾಡಿ ರಾಮಯ್ಯ ಗೌಡ’ಕೃತಿಯನ್ನು ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಬಿಡುಗಡೆ ಮಾಡಿದರು.ಆಹಾರ ಸರಬರಾಜು

ಇಲಾಖೆಯ ಪಡಿತರ ವ್ಯವಸ್ಥೆಯ ಜನಜಾಗೃತಿ ಸಮಿತಿಯ ಜಿಲ್ಲಾ ಸದಸ್ಯರರಾದ ರಾಧಾಕೃಷ್ಣ ಬೊಳ್ಳೂರು ಅಮರ ತರಂಗ ಲಾಂಛನ ಬಿಡುಗಡೆ ಮಾಡಿದರು. ವಿದ್ಯಾಧರ ಕುಡೆಕಲ್ಲು ಬರೆದ ಇತಿಹಾಸ ಕೃತಿ, ‘ಅಮರ ಸುಳ್ಯ – 1837’ ಇದರ ದ್ವಿತೀಯ ಆವೃತ್ತಿಯನ್ನು
ಒಕ್ಕಲಿಗರ ವಾಯ್ಸ್ , ಬೆಂಗಳೂರು ಇದರ ಸಂಪಾದಕ ಎಸ್.ನಾಗಭೂಷಣ್, ಲೋಕಾರ್ಪಣೆ ಮಾಡಿದರು. ಕೆ.ಪಿ.ಸಿ.ಸಿ ಸದಸ್ಯ ಹಾಗೂ ಉದ್ಯಮಿ ನಂದಕುಮಾರ್ ಎಚ್.ಎಂ ಮುಖ್ಯ ಅತಿಥಿಯಾಗಿದ್ದರು.
ಅಮರ ತರಂಗದ ಅಧ್ಯಕ್ಷ ತೇಜಕುಮಾರ್ ಬಡ್ಡಡ್ಕ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಧರ ಕುಡೆಕಲ್ಲು ವೇದಿಕೆಯಲ್ಲಿದ್ದರು. ಎ.ಕೆ. ಹಿಮಕರ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಜೀವ ಕುದ್ಪಾಜೆ ವಂದಿಸಿದರು. ನಾರಾಯಣ ಶೇಡಿಕಜೆ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮ ಬಳಿಕ “ಅಮರ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ” ನಾಟಕ ಪ್ರದರ್ಶನ ನಡೆಯಿತು.