ಬೆಳ್ಳಾರೆ: ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್, ಗ್ರಾಮ ಪಂಚಾಯತ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಹಾಗೂ ಅಕ್ಷಯ ಯುವಕ ಮಂಡಲ ನೆಟ್ಟಾರು ಇವುಗಳ ಆಶ್ರಯದಲ್ಲಿ “ಅಮರ ಸುಳ್ಯ ವಿಜಯ ಸ್ಮರಣೆ ದಿನ ಮಾ.30ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಂಗಣದಲ್ಲಿ ಪೂ. 9:30ಕ್ಕೆ ನಡೆಯಲಿದೆ.1837ರ ಮಾರ್ಚ್ 30 ರಂದು ಭಾರತದಲ್ಲಿ
ಬ್ರಿಟೀಷರ ವಿರುದ್ಧ ಮೊಟ್ಟಮೊದಲ ಸಂಘಟಿತ ಪ್ರತಿರೋಧದ ದಾಖಲೆಬದ್ಧ ಉದಾಹರಣೆಯಾಗಿ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ” ವು ಬೆಳ್ಳಾರೆ ಯಲ್ಲಿ ಪ್ರಾರಂಭಗೊಂಡಿತು. ಈ ಐತಿಹಾಸಿಕ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ.ಎಲ್ ರೈ ಧ್ವಜಾರೋಹಣ ನೆರವೇರಿಸುವರು, ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅಭ್ಯಾಗತರಾಗಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರತೀಕ್ ಪೊನ್ನಣ್ಣ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬುಡೇಲು, ಕೆ.ಪಿ.ಎಸ್ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶಪಾಲರಾದ ಸೀತರಾಮ ಕೇವಳ ಇವರು ಉಪಸ್ಥಿತರಿರಲಿದ್ದಾರೆ ಎಂದು ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ನ ಅಧ್ಯಕ್ಷರಾದ ಅನಿಂದಿತ್.ಕೆ.ಎಸ್ ತಿಳಿಸಿದ್ದಾರೆ.