ಐವರ್ನಾಡು:ಗೆಳೆಯರ ಬಳಗ ಐವರ್ನಾಡು ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಹಾಗೂ ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಐವರ್ನಾಡಿನಲ್ಲಿ ನಡೆಯುತ್ತಿರುವ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ
ಆಳ್ವಾಸ್ ಮೂಡಬಿದ್ರೆ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ. ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಬಿರುಸಿನ ಹೋರಾಟದಲ್ಲಿ ಆಳ್ವಾಸ್ ತಂಡ ಜೆಕೆ ಅಕಾಡೆಮಿ ಕಾಸರಗೋಡು ತಂಡದ ವಿರುದ್ಧ 21-20 ಅಂಕಗಳ ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು. ಸಮಬಲದಲ್ಲಿ ಸಾಗಿದ ಪಂದ್ಯದಲ್ಲಿ ಜಿದ್ದಾ ಜಿದ್ದಿನ ಪಂದ್ಯದಲ್ಲಿ ಅಲ್ಪ ಮುನ್ನಡೆಯಲ್ಲಿದ್ದ ಜೆಕೆ ಅಕಾಡಮಿ ತಂಡವನ್ನು ಕೊನೆಯ ಕ್ಷಣದಲ್ಲಿ ಹಿಂದಿಕ್ಕಿ ಆಳ್ವಾಸ್ ಗೆಲುವು ದಾಖಲಿಸಿತು. ಕೊನೆಯಲ್ಲಿ ರೆಪ್ರಿ ತೀರ್ಮಾನದ ವಿರುದ್ಧ ಜೆಕೆ ಅಕಾಡೆಮಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದರು. ಇದು ಕೆಲ ಹೊತ್ತು ವಾದ ವಿವಾದಕ್ಕೆ ಮತ್ತು ಗೊಂದಲಕ್ಕೆ ಕಾರಣವಾಯಿತು. ಬಳಿಕ ಸಂಘಟಕರು ಮಧ್ಯ ಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಿತು.