ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು)ದ ಸುಳ್ಯ ತಾಲೂಕು ಸಂಘದ ವತಿಯಿಂದ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಅಕ್ಷರ ದಾಸೋಹ ನೌಕರರ ಏರಿಕೆಯಾದ ಮಾಸಿಕ ವೇತನ
1,000/ ನೀಡಲು ಆದೇಶ ಹೊರಡಿಸಬೇಕು, ಮಾಸಿಕ ವೇತನ 12,000 ನಿಗದಿಪಡಿಸಬೇಕು, 60 ವರ್ಷ ಪ್ರಾಯದ ಕಾರ್ಮಿಕರಿಗೆ 1 ಲಕ್ಷ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಸಿಐಟಿಯು ಪ್ರಧಾನ ಕಾರ್ಯದರ್ಶಿ ರಾಬರ್ಟ್ ಡಿಸೋಜ ಮಾತನಾಡಿದರು. ಅಕ್ಣರ ದಾಸೋಹ ಸಂಘದ ಅಧ್ಯಕ್ಷರಾದ ಲೀಲಾವತಿ ಅಲೆಕ್ಕಾಡಿ, ಪ್ರಧಾನ ಕಾರ್ಯದರ್ಶಿ ಲೀಲಾವತಿ ಸೂರ್ತಿಲ, ಭವ್ಯ ಎಂಡಮಂಗಲ, ಲತಾ ಪದವು, ಉಪಾಧ್ಯಕ್ಷರಾದ ವಿಜಯಲಕ್ಷ್ಮಿ, ಸುನಿತಾ ಎಲಿಮಲೆ, ಕಾರ್ಯದರ್ಶಿ ಸುಮಿತ್ರಾ, ಕುಸುಮ, ಸಾವಿತ್ರಿ, ಖಜಾಂಜಿ ಪುಷ್ಪಾ ಬಿ.ಕೆ. ಹೇಮಾವತಿ ಬೆಳ್ಳಾರೆ, ಗಿರಿಜಾ, ಜಾನಕಿ, ಹರಿಣಾಕ್ಷಿ, ಚಂದ್ರಾವತಿ, ಕಮಲ, ಹರಿಣಾಕ್ಷಿ ಬೆಳ್ಳಾರೆ, ಯಮುನಾ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.