ಸುಳ್ಯ: ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಫೆಬ್ರವರಿ 2 ರಿಂದ 6ರ ತನಕ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಅಜ್ಜಾವರ ಮೇನಾಲ ಜಮಾ ಅತ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮಾ ಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ ಕಾರ್ಯಕ್ರಮದ ವಿವರ ನೀಡಿದರು. ಜಾತಿ-ಮತ ಭೇದವಿಲ್ಲದೆ ಸರ್ವ ಧರ್ಮೀಯರು ಗೌರವಿಸಲ್ಪಡುವ ಹಲವಾರು
ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಪ್ಯ ಪಡೆದ ಮಹಾತ್ಮರುಗಳ ಮಖ್ ಬರವಿರುವ ಪುಣ್ಯಸ್ಥಳ ಅಜ್ಜಾವರ – ಮೇನಾಲ ದರ್ಗಾ ಶರೀಫ್. ಇಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ. ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನಡೆಯಲಿದ್ದು ಅನೇಕ ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ. ಉರೂಸ್ ಸಮಾರಂಭ ಪ್ರಯುಕ್ತ ಸಮಾರೋಪ ಸಮಾರಂಭದಂದು ಸರ್ವ ಧರ್ಮ ಸೌಹಾರ್ದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಫೆ.2 ರಂದು ಶುಕ್ರವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ
ಕಾರ್ಯಕ್ರಮವನ್ನು ದಾರುಸ್ಸಲಾಂ ಬೆಳ್ತಂಗಡಿ ಅಧ್ಯಕ್ಷರಾದ
ಸಯ್ಯಿದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ದುವಾಃ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಜ್ಜಾವರ ಎಂಜೆಎಂ ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಫೆ.3ರಂದು ಶನಿವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಿಯಾಝ್ ಫೈಝಿ ಎಮ್ಮೆಮಾಡು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಫೆ.4ರಂದು ಆದಿತ್ಯವಾರ ಮೇನಾಲ ದರ್ಗಾ ಶರೀಫ್ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ಮತ್ತು ದಿಕ್ರ್ ಹಲ್ಕಾ ನಡೆಯಲಿದೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ.ಕ.ಜಿಲ್ಲಾ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಉದ್ಘಾಟಿಸಿ ನೇತೃತ್ವ ವಹಿಸಲಿದ್ದಾರೆ. ಅಬ್ದುಲ್ ರಝಾಕ್ ಅಬ್ರಾರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಫೆ.5 ರಂದು ಸೋಮವಾರ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಯ್ಯದ್ ಹಕೀಂ ತಂಙಳ್ ಅವರು ಗೌರವ ಉಪಸ್ಥಿತರಿರುವರು. ಮಾಹಿನ್ ಮನ್ನಾನಿ ವೆಂಬಾಯಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಫೆಬ್ರವರಿ 6ರಂದು ನಡೆಯುವ ಉರೂಸ್ ಸಮಾರೋಪ ಸಮಾರಂಭಕ್ಕೆ ಮುನ್ನ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ. ಸೌಹಾರ್ದ ಸಂಗಮ ಕಾರ್ಯಕ್ರಮವು ಸಂಜೆ 7.00 ಕ್ಕೆ ಪ್ರಾರಂಭಗೊಂಡು ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ ದುವಾ ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮೊಕೇಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ ಸದಾಶಿವ, ಎಸ್ಕೆಎಸ್ಎಸ್ಎಫ್ ಟ್ರೆಂಡ್ ಕರ್ನಾಟಕದ ಅಧ್ಯಕ್ಷ ಇಕ್ಬಾಲ್ ಬಾಳಿಲ ಮುಖ್ಯ ಭಾಷಣ ಹಾಗೂ ಸರ್ವ ಧರ್ಮೀಯರು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಎ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳ ಖತೀಬ್ ಅಬ್ದುಲ್ ಖಾದರ್ ಮುನವ್ವರಿ ನೆರವೇರಿಸಲಿದ್ದಾರೆ ಅಂತಾರಾಷ್ಟ್ರೀಯ ಪ್ರಭಾಷಣಗಾರ ಹಾಪಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ,ಗಣ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಸಭೆ ಸಭಾಪತಿಗಳಾದ ಯು.ಟಿ ಖಾದರ್ ಫರೀದ್ ಅವರು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.
ಧಾರ್ಮಿಕ ಉಪನ್ಯಾಸವು ಪ್ರತೀದಿನ ರಾತ್ರಿ 7:30 ಆರಂಭಗೊಳ್ಳಲಿದೆ.
ಫೆ. 6ರಂದು ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ಮತ್ತು ಅನ್ನದಾನ ಇರಲಿದೆ .ಹರಕೆ ಮತ್ತು ಇತರ ಸಾಮಗ್ರಿಗಳನ್ನು ನೇರವಾಗಿ ದರ್ಗಾಕ್ಕೆ ತಲುಪಿಸಬಹುದು ಎಂದು ಶಾಫಿ ಮುಕ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಜ್ಜಾವರ ಮೇನಾಲ
ಜಮಾ ಅತ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಎ, ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿ, ಕೋಶಾಧಿಕಾರಿ ಶರೀಫ್ ರಿಲಾಕ್ಸ್, ಸದಸ್ಯರಾದ ಹಮೀದ್ ಬಿ.ಎಂ, ಸಿದ್ದಿಕ್ ಮೇನಾಲ ಉಪಸ್ಥಿತರಿದ್ದರು.









