ಸುಳ್ಯ:ಸುಳ್ಯದಿಂದ ಅಜ್ಞಾವರ – ಅಡಂಗಾಯ-ಮಂಡೆಕೋಲು – ಅಡೂರು ಮಾರ್ಗವಾಗಿ ಕೊಟ್ಯಾಡಿ ಮುಖಾಂತರ ಕುಂಟಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಸೌಲಭ್ಯ ಒದಗಿಸುವಂತೆ ಸುಳ್ಯ ಡಿಪೋ ಮ್ಯಾನೇಜರ್ ಅವರಿಗೆ ಸುಳ್ಯ ಯುವ ಕಾಂಗ್ರೆಸ್ ಮನವಿ ಸಲ್ಲಿಸಿದ್ದಾರೆ.
ಸುಳ್ಯದಿಂದ ರಾತ್ರಿ 7.00 ಗಂಟೆಗೆ ಅಜ್ಞಾವರ – ಅಡ್ಡಂಗಾಯ-ಮಂಡೆಕೋಲು – ಅಡೂರು -ಕೊಟ್ಯಾಡಿ – ಗಾಳಿಮುಖ ವಾಗಿ ಕುಂಟಾರು ಮಹಾ ವಿಷ್ಣು ದೇವಾಲಯದ ಬಳಿ ತಂಗುವ ಬಸ್ಸು ಹಾಗೂ ಸುಳ್ಯದಿಂದ
ಕಾಸರಗೋಡಿಗೆ ಬೆಳಿಗ್ಗೆ 10.00 ಗಂಟೆಗೆ ಹೊರಡುವ ಸುಳ್ಯ ಘಟಕದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಸುಳ್ಯ-ಅಜ್ಞಾವರ – ಅಡಂಗಾಯ- ಮಂಡೆಕೋಲು ಅಡೂರು – ಕೊಟ್ಯಾಡಿ ಮುಖಾಂತರ ಕಾಸರಗೋಡಿಗೆ ಹೋಗಿ ಪುನಃ ಅದೇ ಮಾರ್ಗವಾಗಿ ಹಿಂತಿರುಗಿ ಬರುವ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದರಿಂದ ಈ ಭಾಗದ ಸಾರ್ವಜನಿಕರಿಗೆ ಕಾಸರಗೋಡಿಗೆ ಹೋಗಿ ಬರಲು ನೇರ ಬಸ್ಸಿನ ಸೌಲಭ್ಯ ದೊರೆಯುತ್ತದೆ. ಅದೇ ರೀತಿ ರಾತ್ರಿ 7.00 ಗಂಟೆಗೆ ಸುಳ್ಯದಿಂದ ಅಜ್ಞಾವರ – ಅಡಂಗಾಯ- ಮಂಡೆಕೋಲು – ಅಡೂರು – ಕೊಟ್ಯಾಡಿ – ಗಾಳಿಮುಖ ವಾಗಿ ಕುಂಟಾರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಂಗುವ ಬಸ್ಸಿನ ಸೌಲಭ್ಯದ, ಮರುದಿನ ಬೆಳಿಗ್ಗೆ 7.00 ಗಂಟೆಗೆ ಕುಂಟಾರು ದೇವಾಲಯ ಸಮೀಪದಿಂದ ಸುಳ್ಯಕ್ಕೆ ಅದೇ ಮಾರ್ಗವಾಗಿ ಬಿಡುವ ವ್ಯವಸ್ಥೆಯನ್ನು ಮಾಡಬೇಕು ಇದರಿಂದ ಆ ಭಾಗದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗುವುದು ಈ ಎರಡು ಬೇಡಿಕೆಯನ್ನು ಈಡೇರಿಸಿ ಕೊಡುವಂತೆ ಮನವಿ ಮಾಡಲಾಯಿತು.
ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಹಾಗೂ ಯುವ ಕಾಂಗ್ರೆಸ್ ಸುಳ್ಯ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ರಂಜಿತ್ ರೈ ಮೇನಾಲ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಅಬ್ಬಾಸ್ ಅಡ್ಕ, ಶರವಣ ಕುಮಾರ್ ಮೇದಿನಡ್ಕ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಅಬ್ದುಲ್ ರಹಿಮಾನ್ ಅಜ್ಜಾವರ ಉಪಸ್ಥಿತರಿದ್ದರು.












