ಸುಳ್ಯ:ಪ್ರತಾಪ ಯುವಕ ಮಂಡಲ ಅಜ್ಜಾವರ ಮತ್ತು ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ವತಿಯಿಂದ ಸುಳ್ಯ ಸುದ್ದಿ ಹಬ್ಬ ಅಜ್ಜಾವರ ಗ್ರಾಮ ಸಮಿತಿ ಇದರ ಸಹಕಾರದಲ್ಲಿ 4ನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಕಾರ್ಯಕ್ರಮ ಆ.3ರಂದು ಅಜ್ಜಾವರ ಕೊರಂಗುಬೈಲು ಗದ್ದೆಯಲ್ಲಿ ನಡೆಯಲಿದೆ ಎಂದು ಸಂಘಟಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜ್ಜಾವರ ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಕಂಡದ ಗೌಜಿ ಕಾರ್ಯಕ್ರಮಕ್ಕೆ
ಅದ್ದೂರಿ ಸಿದ್ಧತೆ ನಡೆದಿದೆ. ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉದ್ಘಾಟಿಸಲಿದ್ದಾರೆ. ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಅಧ್ಯಕ್ಷತೆ ವಹಿಸಿದ್ದರು. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ಕಾಟಿಪಳ್ಳ, ವಿಶ್ವೇಶ್ವರ ತಾಂತ್ರಿಕ ವಿವಿಯ ಮಂಗಳೂರು ವಿಸ್ತರಣಾ ಕೇಂದ್ರದ ವಿಶೇಷಾಧಿಕಾರಿ ಡಾ.ದಾಮೋದರ ನಾರಾಲು ಮತ್ತಿತರರು ಭಾಗವಹಿಸಲಿದ್ದಾರೆ. ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ, ಪ್ರತಾಪ ಯುವಕ ಮಂಡಲದ ಮಾಜಿ ಅಧ್ಯಕ್ಷ ಎ.ಎಸ್.ಮನ್ಮಥ, ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿಯ ಅಧ್ಯಕ್ಷ ಕೆ.ಕರುಣಾಕರ ಕೊಡೆಂಕಿರಿ, ಕಾರ್ಯದರ್ಶಿ ಅಬ್ಬಾಸ್ ಅಡ್ಕ, ಚೈತ್ರ ಯುವತಿ ಮಂಡಲದ ಉಪಾಧ್ಯಕ್ಷೆ ಮಾಲತಿ ಸೂರ್ಯ, ಪ್ರತಾಪ ಯುವಕ ಮಂಡಲದ ಕೋಶಾಧಿಕಾರಿ ಲೋಕೇಶ್ ರಾವ್ ಮಾವಿನಪಳ್ಳ ಉಪಸ್ಥಿತರಿದ್ದರು.





