ಸುಳ್ಯ:ಪ್ರತಾಪ ಯುವಕ ಮಂಡಲ ಅಜ್ಜಾವರ ಮತ್ತು ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ವತಿಯಿಂದ 4ನೇ ವರ್ಷದ ಕಂಡದ ಗೌಜಿ ಕೆಸರ್ದ ಪರ್ಬ ಕಾರ್ಯಕ್ರಮ ಆ.3ರಂದು ಅಜ್ಜಾವರದ
ಕೊರಂಗುಬೈಲು ಗದ್ದೆಯಲ್ಲಿ ನಡೆಯಲಿದೆ. ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಉದ್ಘಾಟಿಸಲಿದ್ದಾರೆ. ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ ಅಧ್ಯಕ್ಷತೆ ವಹಿಸುವರು. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ಕಾಟಿಪಳ್ಳ, ವಿಶ್ವೇಶ್ವರ ತಾಂತ್ರಿಕ ವಿವಿಯ ಮಂಗಳೂರು ವಿಸ್ತರಣಾ ಕೇಂದ್ರದ ವಿಶೇಷಾಧಿಕಾರಿ ಡಾ.ದಾಮೋದರ ನಾರಾಲು ಮತ್ತಿತರರು ಭಾಗವಹಿಸಲಿದ್ದಾರೆ. ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.





