ಸುಳ್ಯ:ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ಎಜೆ ಮ್ಯಾರಥಾನ್ -2025′ ನಡೆಯಿತು. ಮ್ಯಾರಥಾನ್ನಲ್ಲಿ ವಿವಿಧ ವಿಭಾಗದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಮ್ಯಾರಥಾನ್ಗೆ ಚಾಲನೆ ನೀಡಿದರು.ಮ್ಯಾರಥಾನ್ ಮೂಲಕ
ಕಾಲೇಜಿನ ದಶಮಾನೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು.
ಎಒಎಲ್ಇ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್.ಪ್ರಸಾದ್, ಟ್ರಸ್ಟಿಗಳಾದ ಡಾ. ಅಭಿಜ್ಞಾ, ಮೌರ್ಯ ಆರ್. ಕುರುಂಜಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಎಸ್.ಎಲ್.ವಿ. ಮಾಲಕರಾದ ದಿವಾಕರ ದಾಸ್, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪಪ್ರಾಂಶುಪಾಲ ದೀಪಕ್ ವೈ.ಆರ್, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಎಒಎಲ್ಇ ಕಮಿಟಿ ಬಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಪ್ರಮುಖರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ದಶಮಾನೋತ್ಸವದ ಪೂರ್ವಭಾವಿಯಾಗಿ

ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಆಯೋಜಿಸಲಾಗಿತ್ತು.
ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಿತು.
18 ವರ್ಷಕ್ಕಿಂತ ಮೇಲ್ಪಟ್ಟವರು(ಪುರುಷರು, ಮಹಿಳೆಯರು),
16-18 ವರ್ಷದ ಹುಡುಗರು-ಹುಡುಗಿಯರು-
15 ವರ್ಷಕ್ಕಿಂತ ಕೆಳಗಿನ ಬಾಲಕ ಬಾಲಕಿರು ಎಂಬ ವಿಭಾಗದಲ್ಲಿ ಓಟ ನಡೆಯಿತು.
ಪುರುಷರು (18 ವರ್ಷ ಮೇಲ್ಪಟ್ಟವರು): 10 ಕಿ.ಮೀ
ಮಹಿಳೆಯರು, 16-18 ವಯೋಮಾನದವರು 5 ಕಿ.ಮೀ 5 ಕಿ.ಮೀ ಓಟ ನಡೆಯಿತು.
ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಆರಂಭವಾಗಿ ಮ್ಯಾರಥಾನ್ ಕೆವಿಜಿ ಸರ್ಕಲ್-
ವಿವೇಕಾನಂದ ಸರ್ಕಲ್- ಜ್ಯೋತಿ ಸರ್ಕಲ್- ಶ್ರೀರಾಂಪೇಟೆ- ಪೈಚಾರ್ ತನಕ ಸಂಚರಿಸಿ ಹಿಂತಿರುಗಿ ಸುಳ್ಯ ಬಸ್ ಸ್ಟ್ಯಾಂಡ್ – ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಂಡಿತು.
















