ಸುಳ್ಯ: ಒಂದು ಸಾವಿರಕ್ಕೂ ಅಧಿಕ ಮಂದಿ ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಎಜೆ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿದೆ. ಈ ಯಶಸ್ಸು ಡಾ.ಕುರುಂಜಿಯವರಿಗೆ ಸಂದ ದೊಡ್ಡ ಗೌರವ ಎಂದು ಅಲಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಅಧ್ಯಕ್ಷರಾದ ಡಾ.ಕೆ.ವಿ.ರೇಣುಕಾ ಪ್ರಸಾದ್ ಹೇಳಿದ್ದಾರೆ.ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ
ದಶಮಾನೋತ್ಸವ ಪ್ರಯುಕ್ತ ಡಿ.26ರಂದು ನಡೆದ ಮ್ಯಾರಥಾನ್ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದಿದೆ.ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸುಳ್ಯ ಪೊಲೀಸ್ ಉಪನಿರೀಕ್ಷ ಸಂತೋಷ್ ಬಿ.ಪಿ.ಮಾತನಾಡಿ ಈ ರೀತಿಯ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲು ಸಾಧ್ಯ ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಪ್ರಧಾನ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್ ಮಾತನಾಡಿ ‘ಪ್ರತಿ ವರ್ಷ ಕೆವಿಜಿ ಹುಟ್ಟು ಹಬ್ಬದ ದಿನ ಏನಾದರು ಒಂದು ವಿಶೇಷ ಇವೆಂಟ್ ಮಾಡಬಹುದು.ಮ್ಯಾರಥಾನ್ ಪ್ರತಿ ವರ್ಷ ಮಾಡಿದರೆ ಉತ್ತಮ. ಆರೋಗ್ಯಕ್ಕೆ ಎಲ್ಲರೂ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್.ಕುರುಂಜಿ ಮಾತನಾಡಿ ಆರೋಗ್ಯ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಿದರು.

ಕಮಿಟಿ ಬಿ ನಿರ್ದೇಶಕಿ ಡಾ.ಅಭಿಜ್ಞಾ, ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರಾಜೇಶ್, ಅಕ್ಷತಾ, ಪ್ರಶಾಂತ್, ಆಶಾ ಉಪಸ್ಥಿತರಿದ್ದರು ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಸ್ವಾಗತಿಸಿ, ಅಕಾಡೆಮಿ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ವಂದಿಸಿದರು. ಮಲ್ಲಿಕಾ ಹಾಗೂ ರೀತಾ ಕಾರ್ಯಕ್ರಮ ನಿರೂಪಿಸಿದರು.
ಮ್ಯಾರಥಾನ್ನಲ್ಲಿ ವಿವಿಧ ವಿಭಾಗದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ದಶಮಾನೋತ್ಸವದ ಪೂರ್ವಭಾವಿಯಾಗಿ ಸಂಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಆಯೋಜಿಸಲಾಗಿತ್ತು.
















