ಸುಳ್ಯ:ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಡಿ.26ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ಮೂಲಕ ದಶಮಾನೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಲಾಗುತ್ತದೆ. ಮ್ಯಾರಥಾನ್ನಲ್ಲಿ ಭಾಗವಹಿಸಲು ವಿವಿಧ ವಿಭಾಗದಲ್ಲಿ ಈಗಾಗಲೇ
ಒಂದು ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 1074 ಮಂದಿ ಈಗಾಗಲೇ ಹೆಸರು ದಾಖಲಿಸಿಕೊಂಡಿದ್ದಾರೆ. ಮ್ಯಾರಥಾನ್ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಭರದ ಸಿದ್ಧತೆ ನಡೆಸಲಾಗಿದೆ.
2026-27ನೇ ಸಾಲಿನಲ್ಲಿ ಜರಗಲಿರುವ ಕಾಲೇಜಿನ ದಶಮಾನೋತ್ಸವದ ಪೂರ್ವಭಾವಿಯಾಗಿ ಸಂಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ ಡಿ.26 ರಂದು ‘ಆರೋಗ್ಯಕ್ಕಾಗಿ ಓಟ’ ಎಂಬ ಮ್ಯಾರಥಾನ್ ಆಯೋಜಿಸಲಾಗಿದೆ. ದಶಮಾನೋತ್ಸವದ ಪ್ರಯುಕ್ತ ನಡೆಯುವ ಮ್ಯಾರಥಾನ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ, ಟಿ-ಶರ್ಟ್ ಹಾಗೂ ಪದಕಗಳನ್ನು ನೀಡಲಾಗುವುದು. ಮ್ಯಾರಥಾನ್ ಯಶಸ್ವಿಗೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ.ಜ್ಯೋತಿ ಆರ್, ಪ್ರಸಾದ್, ಡಾ.ಅಭಿಜ್ಞ, ಮೌರ್ಯ ಆರ್.ಪ್ರಸಾದ್, ಸಂಪೂರ್ಣ ಬೆಂಬಲ ನೀಡಿದ್ದಾರೆ. ಆಡಳಿತ ಮಂಡಳಿ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ ‘ಯಲ್ಲಿ ಬರುವ ಎಲ್ಲ ಸಹ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಪ್ರಸಿದ್ದ ಕ್ರೀಡಾಪಟುಗಳು ಹಾಗೂ ಗಣ್ಯರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು
ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದ ರಾಮಚಂದ್ರ
ತಿಳಿಸಿದ್ದಾರೆ.

ಬೆಳಿಗ್ಗೆ 6 ಗಂಟೆಗೆ ಮ್ಯಾರಥಾನ್ ಆರಂಭಗೊಂಡು 8 ಗಂಟೆಗೆ ಸಮಾಪನಗೊಳ್ಳಲಿದೆ. ಪ್ರಥಮ ತಂಡವನ್ನು ಬೆಳಿಗ್ಗೆ 6.15ಕ್ಕೆ ಬಿಡಲಾಗುತ್ತದೆ, ಎರಡನೇ ತಂಡ 6.30ಕ್ಕೆ, ಮೂರನೇ ತಂಡ 7.10ಕ್ಕೆ ಓಟ ಪ್ರಾರಂಭಿಸಲಿದೆ.
ಮ್ಯಾರಥಾನ್ ವಿಭಾಗಗಳು:
ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದೆ
18 ವರ್ಷಕ್ಕಿಂತ ಮೇಲ್ಪಟ್ಟವರು(ಪುರುಷರು, ಮಹಿಳೆಯರು),
ಪುರುಷರು, 10 ಕಿ.ಮೀ
ಮಹಿಳೆಯರು 5 ಕಿ.ಮೀ,
16-18 ವರ್ಷದ ಹುಡುಗರು-ಹುಡುಗಿಯರು-
5 ಕಿ.ಮೀ.
15 ವರ್ಷಕ್ಕಿಂತ ಕೆಳಗಿನ ಬಾಲಕ ಬಾಲಕಿರು-3 ಕಿ.ಮಿ.
ಬಹುಮಾನವಾಗಿ ನಗದು, ಮೆಡಲ್ ನೀಡಲಾಗುತ್ತದೆ.
ಪ್ರವೇಶ ಶುಲ್ಕ 200ರೂ.ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್ ಮತ್ತು ಸರ್ಟಿಫಿಕೇಟ್ ನೀಡಲಾಗುವುದು. ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು ಎಂದು ಡಾ.ಯಶೋದ ರಾಮಚಂದ್ರ
ವಿವರಿಸಿದರು.
ಓಟದ ಮಾರ್ಗ:
ಪುರುಷರು (18 ವರ್ಷ ಮೇಲ್ಪಟ್ಟವರು): 10 ಕಿ.ಮೀ
ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಆರಂಭವಾಗಿ ಮ್ಯಾರಥಾನ್ ಕೆವಿಜಿ ಸರ್ಕಲ್-
ವಿವೇಕಾನಂದ ಸರ್ಕಲ್- ಜ್ಯೋತಿ ಸರ್ಕಲ್- ಶ್ರೀರಾಂಪೇಟೆ- ಪೈಚಾರ್ ತನಕ ಸಂಚರಿಸಿ ಹಿಂತಿರುಗಿ ಸುಳ್ಯ ಬಸ್ ಸ್ಟ್ಯಾಂಡ್ – ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.
ಮಹಿಳೆಯರು, 16-18 ವಯೋಮಾನದವರು 5 ಕಿ.ಮೀ 5 ಕಿ.ಮೀ
ವಿವೇಕಾನಂದ ಸರ್ಕಲ್ ಶ್ರೀರಾಂಪೇಟೆ ಸುಳ್ಯ ಬಸ್ ಸ್ಟ್ಯಾಂಡ್ ಗಾಂಧಿನಗರ ಅಮರ ಶ್ರೀ ಹಾಲ್ ಬಳಿ ತೆರಳಿ ಹಿಂತಿರುಗಿ ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.
3 ಕಿ.ಮಿ. ಕಾಲೇಜಿನಿಂದ ಶ್ರೀರಾಮ ಪೇಟೆ, ರಥಬೀದಿಯಾಗಿ ಕಾಲೇಜಿಗೆ ಆಗಮಿಸುವಂತೆ ಮಾರ್ಗ ಸೂಚಿ ನೀಡಲಾಗುವುದು.
ಮಾರ್ಗದುದ್ದಕ್ಕೂ ನೀರಿನ ಸ್ಟೇಷನ್ಗಳು, ವೈದ್ಯಕೀಯ ಸೇವೆ, ತುರ್ತು ವಾಹನ ವ್ಯವಸ್ಥೆ ಹಾಗೂ ಭಾಗವಹಿಸುವರಿಗಾಗಿ ಬೆಳಗಿನ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು
ಅವರು ವಿವರಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಆರ್, ಕಮಲಾಕ್ಷ ನಂಗಾರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
















