ಸುಳ್ಯ :ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ 85 ನೇ ಸಮಗ್ರ ಅಧಿವೇಶನವು ಛತ್ತೀಸ್ ಗಡ್ದ ರಾಯಪುರದ ನವ ನಗರದಲ್ಲಿ ಫೆಬ್ರವರಿ 24,25,26 ರಂದು ನಡೆಯಲಿದೆ ಎಂದು ಕೆ.ಪಿ.ಸಿಸಿಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ. ಒಟ್ಟು 15 ಸಾವಿರ ಪ್ರತಿನಿಧಿಗಳು ಸಮ್ಮೇಳನ ದಲ್ಲಿ ಭಟಗವಹಿಸಲಿದ್ದು, ಅದರಲ್ಲಿ ಎ.ಐ.ಸಿ.ಸಿ ಯ 1338 ಚುನಾಯಿತ ಸದಸ್ಯರು,487 ಸಹ ಸದಸ್ಯರು ಒಟ್ಟು 1825 ಅಲ್ಲದೆ 9915 ಪ್ರದೇಶ್


ಕಾಂಗ್ರೇಸ್ ಸಮಿತಿಯ ಪ್ರತಿನಿಧಿಗಳು ಮತ್ತು 3 ಸಾವಿರ ಪಿ.ಸಿ.ಸಿ.ಯ ಸಹ ಸದಸ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ಸದಸ್ಯರಲ್ಲಿ 704 ಸಾಮಾನ್ಯವರ್ಗ 228 ಅಲ್ಪ ಸಂಖ್ಯಾತರು, 381 ಒ.ಬಿ.ಸಿ, 192 ಪರಿಷಿಸ್ಟ ಜಾತಿ , 133 ಪರಿಶಿಷ್ಟ ಪಂಗಡ. ಪ್ರತಿನಿಧಿಗಳಲ್ಲಿ 235 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ ಸಿ.ಡಬ್ಲು.ಸಿ ಗೆ 25 ಮಂದಿ ಸದಸ್ಯರನ್ನು ಆಯ್ಕೆಮಾಡಲಾಗುವುದು. ಚುನಾವಣೆ ನಡೆದರೆ 12 ಜನರ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರನ್ನು ಎ ಐ ಸಿ ಸಿ ಸದಸ್ಯರು ಮತ ನೀಡಿ ಚುನಾಯಿಸುತ್ತಾರೆ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಾರ್ಲಿಮೆಂಟ್ ಪಾರ್ಟಿ ನಾಯಕರು ಪಕ್ಷದ ಸಂವಿಧಾನದ ಪ್ರಕಾರ ಸಿ ಡಬ್ಲ್ಯೂ ಸಿ ಸದಸ್ಯರಾಗುತ್ತಾರೆ ಉಳಿದ 11 ಮಂದಿ ಸದಸ್ಯರನ್ನು ಕಾಂಗ್ರೆಸ್ ಅಧ್ಯಕ್ಷರು ನಾಮ ನಿರ್ದೇಶನ ಗೊಳಿಸಲಾಗುವುದು.ಈ ಸಮ್ಮೇಳನವು 2023 ರ ಕರ್ನಾಟಕ ವಿಧಾನ ಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು. ಈ ಸಮ್ಮೇಳನದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಉನ್ನತ, ಮಟ್ಟದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಇದರಲ್ಲಿ 6 ಪ್ರಮುಖ ನಿರ್ಣಯಗಳಾಗಿದ್ದು ರಾಜಕೀಯ, ಆರ್ಥಿಕ, ಅಂತರಾಷ್ಟ್ರೀಯ, ರೈತ ಮತ್ತು ಕೃಷಿ, ಸಾಮಾಜಿಕ ನ್ಯಾಯ ಮತ್ತು ಯುವಜನ ಸಬಲೀಕರಣ, ಶಿಕ್ಷಣ ಮತ್ತು ಉಧ್ಯೋಗ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.
ಅಧಿವೇಶನ ರಾಯಪುರದಿಂದ 25 ಕಿಲೋಮೀಟರ್ ದೂರದ ನವ ನಗರದಲ್ಲಿ ವಿಶೇಷವಾಗಿ ನಿರ್ಮಿಸಿದ ಸ್ವಾತಂತ್ಯ ಹೋರಾಟಗಾರ ವೀರ್ ನಾರಾಯಣ ಸಿಂಗ್ ನಗರದಲ್ಲಿ ನಡೆಯಲಿದೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸುದೀರ್ಘಕಾಲ ಎ.ಐ.ಸಿ.ಸಿ.ಯ ಖಜಾಂಜಿಯಾಗಿದ್ದ ಮೋತಿ ಲಾಲ್ ವೋರಾ ವೇಧಿಕೆಯಲ್ಲಿ ಕಾಂಗ್ರೇಸ್ ಪಕ್ಷದ 85 ನೆ ಸಂಪೂರ್ಣ ಸಮ್ಮೇಳನ ನಡೆಯಲಿದೆ.ಈ ಪೂರ್ಣ ಅಧಿವೇಶನವು 25 ವರ್ಷದ ನಂತರ ಚುನಾಯಿತರಾದ ಎ.ಐ.ಸಿ.ಸಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ನಡೆಯುವ ಅಧಿವೇಶನ ಎಂದು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.