ಸುಳ್ಯ:ಕೃತಕ ಬುದ್ಧಿಮತ್ತೆ ಇಂದಿನ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಲ್ಲಿ ಒಂದಾಗಿದೆ ಎಂದು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಪಿ.ಎನ್ ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು
ಪ್ಲೇಸ್ಮೆಂಟ್ ವಿಭಾಗದ ಅಡಿಯಲ್ಲಿ ಮ್ಯಾಜಿಕ್ ಬಸ್ ಫೌಂಡೇಶನ್ ಮತ್ತು ಐಬಿಎಂ ಕಂಪನಿ ಸಹಭಾಗಿತ್ವದಲ್ಲಿ 3 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಂತೆ ಯೋಚಿಸಬಲ್ಲ. ಕಲಿತುಕೊಳ್ಳಬಲ್ಲ, ಸಮಸ್ಯೆಗಳನ್ನು ಪರಿಹರಿಸಬಲ್ಲ ವ್ಯವಸ್ಥೆಗಳನ್ನು ರಚಿಸುವ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ ಇದು ವೈದ್ಯಕೀಯ, ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ, ಕಲೆ-ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇದನ್ನು ಸರಿಯಾಗಿ ಬಳಸಿದರೆ ಸೃಜನಾತ್ಮಕತೆ ಹೆಚ್ಚುತ್ತದೆ ಮತ್ತು ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹ ಸಹಾಯ ಮಾಡುತ್ತದೆ ಎಂದು ಹೇಳಿದರು.ಮ್ಯಾಜಿಕ್ ಬಸ್ ಫೌಂಡೇಶನ್ ಪ್ರಬಂಧಕರಾದ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಪ್ರೀತಿ ಕೆ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತೀಶ್ ಕುಮಾರ್ ಕೆ.ಆರ್. ಪ್ಲೇಸ್ಮೆಂಟ್ ವಿಭಾಗದ ಸಂಚಾಲಕರಾದ ಪ್ರೊ. ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಯ್ಡನ್ ಡಿಯೋನ್ ಡಿಸೋಜ, ವೀಣಾ ಕೆ, ಸುಷ್ಮಾ ಪಟೇಲ್, ಕಿಯಾಸತ್ ರಹ್ಮಾನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕೃತಕ ಬುದ್ಧಿಮತ್ತೆ, ಪ್ರೋಗ್ರಾಮಿಂಗ್, ಸೈಬರ್ ಭದ್ರತೆ ಬಗ್ಗೆ ತರಬೇತಿ ನೀಡಲಾಯಿತು.ವಿದ್ಯಾರ್ಥಿನಿ ಪಂಚಮಿ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ಅತಿಥಿಗಳನ್ನು ಸ್ವಾಗತಿಸಿದರು. ಜಸ್ಮಿತಾ ವಂದಿಸಿದರು.





