ಸುಳ್ಯ: ಕರ್ನಾಟಕ ಅಗ್ನಿ ಶಾಮಕದಳ ಮತ್ತು ತುರ್ತು ಸೇವೆಗಳು ಸುಳ್ಯ ಅಗ್ನಿ ಶಾಮಕ ದಳ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಅಗ್ನಿ ಸುರಕ್ಷತೆ ಪ್ರಾತ್ಯಕ್ಷಿಕೆ ಸುಳ್ಯ ಗ್ರೀನ್ ವ್ಯೂ ಶಾಲಾ ಕ್ರೀಡಾoಗಣ ದಲ್ಲಿ ಜರಗಿತು.ಸುಳ್ಯ ಅಗ್ನಿ ಶಾಮಕ ಠಾಣೆಯ
ಠಾಣಾಧಿಕಾರಿ ಕಿರಣ್ ಕುಮಾರ್ ಅವರ ಮಾರ್ಗ ದರ್ಶನದಲ್ಲಿ ಸಿಬ್ಬಂದಿಯವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಅವಘಡಗಳಿಂದ ಉಂಟಾಗುವ ಅನಾಹುತ ತಡೆಯುವ ಜಾಗೃತಿ ಪ್ರತಿಯೊಬ್ಬರಿಗೂ ತಿಳಿದಿರಬೇಕಾಗಿರುವುದು ಅತೀ ಅಗತ್ಯ ಎಂದು ಕಿರಣ್ ಕುಮಾರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಸಂಯೋಜಕರುಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಮೊಟ್ಟೆ, ಮುಖ್ಯ ಶಿಕ್ಷಕ ಇಲ್ಯಾಸ್. ಕೆ. ಕಾಶಿಪಾಟ್ನ ಉಪಸ್ಥಿತರಿದ್ದರು












