ಪುಣೆ:ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾ ವಿರುದ್ಧದ ಅಫ್ಘಾನಿಸ್ತಾನ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಮಾಜಿ ಚಾಂಪಿಯನ್ ಪಾಕಿಸ್ತಾನ ಸೋಲಿಸಿದ ಬಳಿಕ ಇದೀಗ ಶ್ರೀಲಂಕಾ ವಿರುದ್ಧ
ಗೆದ್ದು ಬೀಗಿದೆ. 3 ಪಂದ್ಯದಲ್ಲಿ ಗೆದ್ದಿರುವ ಅಫ್ಘಾನಿಸ್ತಾನ 6 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.ಈ ಸೋಲಿನೊಂದಿಗೆ ಮೆಂಡಿಸ್ ಬಳಗದ ವಿಶ್ವಕಪ್ ಸೆಮಿ ಫೈನಲ್ ಪ್ರವೇಶ ಹಾದಿ ದುರ್ಗಮವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಅಫ್ಘಾನಿಸ್ತಾನಕ್ಕೆ 242ರನ್ ಗಳ ಸಾಧಾರಣ ಗುರಿ ನೀಡಿತ್ತು.ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 45.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 242 ರನ್ ಬಾರಿಸಿ ಗೆಲುವಿನ ನಗೆ ಬೀರಿತು. 57 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ್ದ ಇಬ್ರಾಹಿಂ ಝರ್ದಾನ್, ರಹ್ಮತ್ ಷಾ 74 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 62 ರನ್, ನಾಯಕ ಹಶ್ಮತುಲ್ಲಾ ಶಾಹಿದಿ 74 ಎಸೆತಗಳಲ್ಲಿ 1 ಸಿಕ್ಸರ್ 2 ಬೌಂಡರಿಗಳೊಂದಿಗೆ 58 ರನ್, ಅಝ್ಮತುಲ್ಲಾ ಶಾಹಿದಿ 63 ಎಸೆತಗಳಿಗೆ 3ಸಿಕ್ಸರ್ 6 ಬೌಂಡರಿ ಗಳೊಂದಿಗೆ 73 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಶ್ರೀಲಂಕಾದ ಪರ ದಿಲ್ಶನ್ ಮಧುಶಂಕ 2, ಕಸುನ್ ರಜಿತ 1 ಒಂದು ವಿಕೆಟ್ ಕಬಳಿಸಿದರು.
ಟಾಸ್ ಗೆದ್ದ ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ದುಕೊಂಡು ಶ್ರೀಲಂಕಾಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಶ್ರೀಲಂಕಾದ ಪರ ಓಪನರ್ ಬ್ಯಾಟರ್ ಪಾತುಮ್ ನಿನ್ಸಾಂಕ 60 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 46 ರನ್ ಕುಸಾಲ್ ಮೆಂಡಿಸ್ 50 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 39 ರನ್, ಸದೀರ ಸಮರವಿಕ್ರಮ 40 ಎಸೆತಗಳಲ್ಲಿ 36 ರನ್, ಧನಂಜಯ ಡಿʼಸಿಲ್ವಾ 14, ಚರಿತ್ ಅಸಲಂಕ 22, ದುಶ್ಮಂತ ಚಮೀರ 1, ಮಹೇಶ್ ತೀಕ್ಷಣ 29, ಎಂಜೆಲೋ ಮ್ಯಾಥಿಸ್ 23, ಕಸುನ್ ರಜಿತ 5 ರನ್ ಗೆ ರನೌಟ್ ಆಗುವುದರೊಂದಿಗೆ 49.3 ಓವರ್ ಗೆ ಶ್ರೀಲಂಕಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಅಫ್ಘಾನಿಸ್ತಾನದ ಬೌಲರ್ ಫಝಲ್ ಹಕ್ ಫಾರೂಕಿ 4 ವಿಕೆಟ್ ಪಡೆದರು. ಮುಜೀಬುರ್ರಹ್ಮಾನ್ 2 ವಿಕೆಟ್ ಪಡೆದರು. ಅಝ್ಮತುಲ್ಲಾ ಓಮರ್ಝಾಯಿ, ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.