ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಳದಿ ಮತ್ತು ಎಲೆ ಚುಕ್ಕಿ ರೋಗ ಪೀಡಿತ ಕೃ ಷಿಕರ ತಾಲೂಕು ಸಮಾವೇಶದ ಬಗ್ಗೆ ಚರ್ಚಿಸಲು ದೊಡ್ಡತೋಟ ವಲಯ ಮಟ್ಟದ ಪೂರ್ವಭಾವಿ ಸಭೆ ಎಲಿಮಲೆಲ್ಲಿರುವ
ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜರಗಿತು.
ಸಂಚಾಲಕರಾದ ಎನ್.ಎ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕರಾದ ಎಂ.ವೆಂಕಪ್ಪ ಗೌಡ, ಭವಾನಿ ಶಂಕರ ಅಡ್ತಲೆ, ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್, ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ನಿಕಟ ಪೂರ್ವ ವಲಯಾಧ್ಯಕ್ಷ ರಾಜಾರಾಮ್ ಭಟ್ ಬೆಟ್ಟ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶೀಲಾವತಿ, ಮೇಲ್ವಿಚಾರಕ ಸೀತಾರಾಮ್, ವೇದಿಕೆ ಯಲ್ಲಿದ್ದರು.
ಒಕ್ಕೂಟದ ಅಧ್ಯಕ್ಷೆ ಗೀತಾ ಕಜೆ ಸ್ವಾಗತಿಸಿ ನಾರಾಯಣ ಕೋಡ್ತುಗುಳಿ ವಂದಿಸಿದರು