ಸುಳ್ಯ:ಎಲೆಚುಕ್ಕಿ ರೋಗ ಅಡಿಕೆ ಕೃಷಿಗೆ ಮಾರಕವಾಗಿ ಅಪ್ಪಳಿಸಿದ್ದು ಇದರಿಂದ ಕೃಷಿಕರಿಗೆ ತೀವ್ರ ಆರ್ಥಿಕ ಹೊಡೆತ ಉಂಟಾಗಿದೆ. ಈ ಬಗ್ಗೆ ಚರ್ಚಿಸಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ವತಿಯಿಂದ ಕೃಷಿಕರ ಸಮಾಲೋಚನಾ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ವಿವಿಧ ಕೃಷಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಕೆಲವೊಂದು
ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸುಳ್ಯ ತಾಲೂಕಿನಲ್ಲಿ ಎಲೆಚುಕ್ಕಿ ರೋಗದ ಸರ್ವೆ ನಡೆಸುವುದು. ಇದಕ್ಕಾಗಿ ಸಹಕಾರಿ ಯೂನಿಯನ್ನವರ ಸಹಕಾರ ಪಡೆದು ಸಹಕಾರ ಸಂಘಗಳ ಮುಖಾಂತರ ಕಾರ್ಯಕ್ರಮ ರೂಪಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದು. ಬೆಳೆಸಾಲ ಮನ್ನಾಕ್ಕೆ ಆಗ್ರಹಿಸುವುದು. ದೀರ್ಘವಧಿ ಸಾಲದ ಬಡ್ಡಿಮನ್ನಾ ಮತ್ತು ಕಂತುಗಳನ್ನು ವಿಸ್ತರಿಸಲು ಬೇಡಿಕೆ ಸಲ್ಲಿಸುವುದು ಎಂದು ನಿರ್ಣಯಿಸಲಾಯಿತು.
ಈ ಬೇಡಿಕೆಗಳನ್ನು ಈಡೇರಿಸಲು ಪ್ರಥಮ ಹಂತದಲ್ಲಿ ಸಚಿವರು, ಸಂಸದರನ್ನು ನಿಯೋಗದೊಂದಿಗೆ ಭೇಟಿಯಾಗಿ ಮನವಿ ನೀಡುವುದಾಗಿ ತೀರ್ಮಾನಿಸಲಾಯಿತು.
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಸಂಚಾಲಕ ಎಂ.ಡಿ.ವಿಜಯಕುಮಾರ್,
ಪ್ರಮುಖರಾದ ಅಣ್ಣಾ ವಿನಯಚಂದ್ರ,ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ನಿತ್ಯಾನಂದ ಮುಂಡೋಡಿ, ಪಿ. ಸಿ.ಜಯರಾಮ, ಡಿ ಎಸ್ ಗಿರೀಶ್, ಎ.ವಿ.ತೀರ್ಥರಾಮ, ಪಿ.ಎಸ್.ಗಂಗಾಧರ, ವೀರಪ್ಪ ಗೌಡ ಕಣ್ಕಲ್,ಎನ್ ಜಿ ಲೋಕನಾಥ್ ರೈ, ಬಾಲಗೋಪಾಲ ಸೇರ್ಕಜೆ ,ಸದಾನಂದ ಜಾಕೆ, ಪ್ರದೀಪ್ ಕುಮಾರ್ ಕೆ ಎಲ್, ನಾಗೇಶ್ ದೇವರಗುಂದ, ಬಿಟ್ಟಿ ಬಿ ನೆಡುನೀಲಂ, ಕರುಣಾಕರ ಪಾರೆಪ್ಪಾಡಿ, ಸಚಿನ್ ಬಳ್ಳಡ್ಕ, ಉದಯಕುಮಾರ್ ಡಿ ಆರ್, ಸಾಯಿಶೇಖರ್ ಬಿ, ಆದಿತ್ಯ ಕೆ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

















