ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆದಿ ಬೈದೆರುಗಳ ಗರಡಿಯಲ್ಲಿ ಮಾ.2 ರಂದು ರಾತ್ರಿ ಆದಿಬೈದೇರುಗಳ ನೇಮೋತ್ಸವ ಭಕ್ತಿ ಸಡಗರದಿಂದ ನಡೆಯಿತು.ಸಂಜೆ ಮುಹೂರ್ತ ತೋರಣ, ರಾತ್ರಿ ಅನ್ನಸಂತರ್ಪಣೆ, ಬೈದೇರುಗಳ ಗರಡಿ ಇಳಿದು ದೇವಳಕ್ಕೆ ಹೋಗಿ ಕಾಣಿಕೆ ಅರ್ಪಿಸಿ ರಂಗ ಪ್ರವೇಶ ನಡೆಯಿತು.ರಾತ್ರಿ
ಕಿನ್ನಿದಾರು ಗರಡಿ ಇಳಿದು ರಂಗ ಪ್ರವೇಶ ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ
ಸದಸ್ಯರಾದ

ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಎಣ್ಮೂರು ಪಟ್ಟೆ, ಸಂತೋಷ್ ಕುಮಾರ್ ರೈ ಬಳ್ಪ, ಮಾಲಿನಿ ಕುದ್ವ, ಉಮೇಶ್ ಬುಡೆಂಗಿ ಬಳ್ಪ, ಪೈಂದೋಡಿ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಜಿತ್ ಭಟ್ ಪಂಜಬೀಡು, ಗಂಗಾಧರ ಗುಂಡಡ್ಕ, ಮೋನಪ್ಪ ನಾಯ್ಕ ಸೌದಾಮಿನಿ, ಕೇರ್ಪಡ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕನಾಥ ರೈ ಎಣ್ಮೂರು,ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.









