ತಿರುವನಂತಪುರ: ಅಜ್ಜಿ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ಮಲಯಾಳಂನ ಖ್ಯಾತ ನಟಿ ಆರ್. ಸುಬ್ಬಲಕ್ಷ್ಮಿ (87) ಅವರು ನಿಧನರಾದರು. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸುಬ್ಬಲಕ್ಷ್ಮಿ ಅವರು, ಕರ್ನಾಟಿಕ್ ಸಂಗೀತಗಾರ್ತಿ ಮತ್ತು ವರ್ಣಚಿತ್ರಕಾರರೂ ಆಗಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ವಿಶಿಷ್ಟ ಪೋಷಕ ನಟಿಯರಲ್ಲಿ ಒಬ್ಬರಾಗಿದ್ದರು, ನಾಜೂಕು ಮತ್ತು ನಟನಾ ಕೌಶಲ್ಯದಿಂದ ಅಜ್ಜಿಯ ಪಾತ್ರಗಳನ್ನು ಮನಮುಟ್ಟುವಂತೆ ನಿರ್ವಹಿಸುತ್ತಿದ್ದರು.ಕಲ್ಯಾಣರಾಮನ್ (2002), ಪಾಂಡಿಪ್ಪಡ (2005), ನಂದನಂ (2002) ತಿಳಕ್ಕಂ, ಸಿಐಡಿ ಮೂಸ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಮಲಯಾಳಂ ಮಾತ್ರವಲ್ಲದೆ ವಿವಿಧ ಸಿನಿಮಾಗಳಲ್ಲಿಯೂ ನಟಿಸಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.