ಸುಳ್ಯ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಸುಳ್ಯ ಸೆಂಟರ್ ಅಸ್ತಿತ್ವಕ್ಕೆ ಬಂದಿದೆ.ರಾಷ್ಟ್ರೀಯ ಮಟ್ಟದ ಸಂಘಟನೆಯ ಸುಳ್ಯ ಸೆಂಟರ್ನ ನೂತನ ಪದಾಧಿಕಾರಿಗಳ ಪದಗ್ತಹಣ ಸಮಾರಂಭ ಮಾ.21ರಂದು ಸುಳ್ಯದ ಅರಂಬೂರಿನ ಹೋಟೆಲ್ ಶ್ರೀಕೃಷ್ಣ ರಸಪಾಕಂ ಗ್ರ್ಯಾಂಡ್ನ ಸಭಾಭವನದಲ್ಲಿ ನಡೆಯಲಿದೆ ಎಂದು
ಎಸಿಸಿಇ(ಐ) ಸುಳ್ಯ ಸೆಂಟರ್ನ ನಿಯೋಜಿತ ಅಧ್ಯಕ್ಷ ಕೆ.ಆರ್. ಕೃಷ್ಣರಾವ್ ಹೇಳಿದರು.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವರು,ಎಸಿಸಿಇ (ಐ) ಇದರ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ರಾವ್ ಪದಗ್ರಹಣ ನೆರವೇರಿಸಲಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿರುವರು.
ಎಸಿಸಿಐ (ಐ) ಇದರ ಸೌತ್ ಉಪಾಧ್ಯಕ್ಷ ಜೆ. ಪ್ರೇಮ್ ಕುಮಾರ್, ಎಸಿಸಿಇ (ಐ) ವೆಸ್ಟ್ ಉಪಾಧ್ಯಕ್ಷ ಅನಿಲ್ ಕಡ್ಬಾನೆ, ಎಸಿಸಿಇ (ಐ) ಪ್ರಧಾನ ಕಾರ್ಯದರ್ಶಿ ಕಾಶಿ ರಾಮ್ ಅಡೆಪು, ಎಸಿಸಿಇ (ಐ) ಕೋಶಾಧಿಕಾರಿ ಸಿ.ಹೆಚ್. ಪ್ರಕಾಶ್, ಎಸಿಸಿಇ (ಇ) ಪುತ್ತೂರು ಸೆಂಟರ್ನ ಪೂರ್ವಾಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ. ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.ಇದು ರಾಷ್ಟ್ರೀಯ ಮಟ್ಟದಲ್ಲಿ

ನೋಂದಾಯಿತ ಸಂಸ್ಥೆಯಾಗಿದ್ದು ಸುಳ್ಯ ಸೆಂಟರ್ನಲ್ಲಿ ಈಗಾಗಲೇ 53 ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಇಂಜಿನಿಯರ್ ವಿದ್ಯಾಭ್ಯಾಸ ಪಡೆದು 5 ವರ್ಷದ ನಂತರ ಇದರ ಸದಸ್ಯತ್ವ ಪಡೆಯಲು ಅವಕಾಶ ಇರುತ್ತದೆ ಎಂದು ಅವರು ಹೇಳಿದರು.ಸುಳ್ಯ ಸೆಂಟರ್ ಕಾರ್ಯದರ್ಶಿ ಅವಿನ್ ಎಂ.ಹೆಚ್., ಕೋಶಾಧಿಕಾರಿ ಶ್ರೇಯಸ್ ಎಂ.ಡಿ., ವ್ಯವಸ್ಥಾಪಕ ಸಮಿತಿ ಸದಸ್ಯ ಚಂದ್ರಶೇಖರ ಎ., ಸದಸ್ಯರಾದ ಎಂ.ಎಸ್. ಪ್ರಸಾದ್, ನವನೀತ್ ರೈ ಉಪಸ್ಥಿತರಿದ್ದರು.











