ಸುಳ್ಯ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಸುಳ್ಯ ಸೆಂಟರ್ ಅಸ್ತಿತ್ವಕ್ಕೆ ಬಂದಿದೆ.ರಾಷ್ಟ್ರೀಯ ಮಟ್ಟದ ಸಂಘಟನೆಯ ಸುಳ್ಯ ಸೆಂಟರ್ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾ.21ರಂದು ಸುಳ್ಯದ ಅರಂಬೂರಿನ ಹೋಟೆಲ್ ಶ್ರೀಕೃಷ್ಣ ರಸಪಾಕಂ ಗ್ರ್ಯಾಂಡ್ನ ಸಭಾಭವನದಲ್ಲಿ ನಡೆಯಿತು.ಸುಳ್ಯ ಸೆಂಟರ್ನ
ನೂತನ ಅಧ್ಯಕ್ಷ ಕೆ.ಆರ್. ಕೃಷ್ಣರಾವ್ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಸುಳ್ಯ ಸೆಂಟರ್ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ದೇಶ ಕಟ್ಟುವುದರಲ್ಲಿ ಸಿವಿಲ್ ಇಂಜಿನಿಯರ್ಗಳದ್ದು ದೊಡ್ಡ ಕೊಡುಗೆ ಇದೆ. ಅಭಿವೃದ್ಧಿ ನೆಲೆಯಲ್ಲಿ ಸುಳ್ಯವನ್ನು ಸುಂದರವಾಗಿ ವಿನ್ಯಾಸ ಮಾಡುವ ಕನಸು ಇದೆ, ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಅವರು ಹೇಳಿದರು.
ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದ ಎಸಿಸಿಇ (ಐ)ಯ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ರಾವ್ ಮಾತನಾಡಿ ಹಳ್ಳಿಯಿಂದ ರಾಜ್ಯ, ರಾಷ್ಟ್ರ ಮಟ್ಟದವರೆಗೆ ಬೆಳೆಯಲು ಸಂಘಟನೆಗಳು ಸಹಕಾರಿ ಎಂದರು. ನಗರದ, ಊರಿನ ಬೆಳವಣಿಗೆಗೆ ಸಿವಿಲ್ ಇಂಜಿನಿಯರ್ಗಳಿಗೆ ದೊಡ್ಡ ಕೊಡುಗೆ ನೀಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸುಳ್ಯ ಸೆಂಟರ್ನ ನೂತನ ಅಧ್ಯಕ್ಷ ಕೆ.ಆರ್. ಕೃಷ್ಣರಾವ್
ಮಾತನಾಡಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಸುಳ್ಯ ಸೆಂಟರ್ ವತಿಯಿಂದ 2047ರ ವೇಳೆಗೆ ಸುಳ್ಯ ಹೇಗೆ ಅಭಿವೃದ್ಧಿ ಆಗಬೇಕು ಎಂಬ ಮುನ್ನೋಟದ ‘ವಿಷನ್ ರಿಪೋರ್ಟ್’ ತಯಾರಿಸಿ ಶಾಸಕರಿಗೆ ಮುಂದಿನ ವರ್ಷದ ಮಾರ್ಚ್ ಮೊದಲು ನೀಡುತ್ತೇವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಎಸಿಸಿಐ (ಐ) ಇದರ ಸೌತ್ ಉಪಾಧ್ಯಕ್ಷ ಜೆ.ಪ್ರೇಮ್ ಕುಮಾರ್, ಎಸಿಸಿಇ (ಐ) ಪ್ರಧಾನ ಕಾರ್ಯದರ್ಶಿ ಕಾಶಿ ರಾಮ್ ಅಡೆಪು, ಎಸಿಸಿಇ (ಐ) ಕೋಶಾಧಿಕಾರಿ ಸಿ.ಹೆಚ್. ಪ್ರಕಾಶ್, ಎಸಿಸಿಇ (ಇ) ಪುತ್ತೂರು ಸೆಂಟರ್ನ ಪೂರ್ವಾಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ.ಮಾತನಾಡಿದರು.
ಪುತ್ತೂರು ಸೆಂಟರ್ನ ಅಧ್ಯಕ್ಷ ಶಿವರಾಮ ಎಂ.ಎಸ್, ಕಾರ್ಯದರ್ಶಿ ವೆಂಕಟರಾಜ ಪಿ.ಜಿ, ಕೋಶಾಧಿಕಾರಿ ಕಾವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಸುಳ್ಯ ಸೆಂಟರ್ನ ನೂತನ ಅಧ್ಯಕ್ಷ ಕೆ.ಆರ್. ಕೃಷ್ಣರಾವ್, ಕಾರ್ಯದರ್ಶಿ ಅವಿನ್ ಎಂ.ಹೆಚ್., ಕೋಶಾಧಿಕಾರಿ ಶ್ರೇಯಸ್ ಎಂ.ಡಿ. ಹಾಗೂ ಮ್ಯಾನೇಜಿಂಗ್ ಕಮಿಟಿ ಮೆಂಬರ್ಗಳಾದ ಚಂದ್ರಶೇಖರ ಎ., ಮಣಿಕಂಠನ್, ವಿಜಯ ಕುಮಾರ್ ಟಿ. ಅಧಿಕಾರ ವಹಿಸಿಕೊಂಡರು.
ಹಿರಿಯ ಸಿವಿಲ್ ಇಂಜಿನಿಯರ್ ಸುಮಿತ್ರ ಇಂಜಿನಿಯರ್ ಅವರನ್ನು ಸನ್ಮಾನಿಸಲಾಯಿತು.ಪುತ್ತೂರು ಸೆಂಟರ್ನ ಪದಾಧಿಕಾರಿಗಳನ್ನು ಗೌರವಿಸಲಾಯಿತು.ಪುತ್ತೂರು ಸೆಂಟರ್ನ ಅಧ್ಯಕ್ಷರಾದ ಶಿವರಾಮ ಎಂ.ಎಸ್ ಸ್ವಾಗತಿಸಿದರು,ಎಸಿಸಿಇ (ಐ) ಪ್ರಧಾನ ಕಾರ್ಯದರ್ಶಿ ಕಾಶಿ ರಾಮ್ ಅಡೆಪು ಎಸಿಸಿಇ (ಐ) ಕುರಿತು ಮಾತನಾಡಿದರು.
ಅಜಿತ್ ಹೆಬ್ಬಾರ್ ನಿರೂಪಿಸಿದರು.ಎಸಿಸಿಇ(ಐ) ಸುಳ್ಯ ಸೆಂಟರ್ನ ಕಾರ್ಯದರ್ಶಿ ಅವಿನ್ ಎಂ.ಹೆಚ್. ವಂದಿಸಿದರು.
ನವನೀತ್ ಕಾರ್ಯಕ್ರಮ ನಿರೂಪಿಸಿದರು.














