ಮಂಗಳೂರು:ಮಂಗಳೂರು ವಿಭಾಗದ ಎಬಿವಿಪಿ ಬೆಂಬಲಿತ ಆಲ್ ಕಾಲೇಜ್ ಸ್ಟುಡೆಂಟ್ ಯೂನಿಯನ್ 2025-26 ಅಧ್ಯಕ್ಷರಾಗಿ ಸುಳ್ಯದ ಮುಳಿಯ ಸಾತ್ವಿಕ್ ಆಯ್ಕೆಯಾಗಿದ್ದಾರೆ.ಆನ್ಲೈನ್ ವೋಟಿಂಗ್ ಮೂಲಕ ಚುನಾವಣೆ ನಡೆದಿತ್ತು.ಮಂಗಳೂರು ವಿಭಾಗವು ದಕ್ಷಿಣ ಕನ್ನಡ,ಉಡುಪಿ ಮತ್ತು
ಕೊಡಗು ಈ ಮೂರು ಜಿಲ್ಲೆಗಳನ್ನೊಳಗೊಂಡ ಶೈಕ್ಷಣಿಕ ವಲಯವಾಗಿದೆ.ಇವರು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ನ ಸ್ಟುಡೆಂಟ್ ಫೋರಂ ಅಧ್ಯಕ್ಷರೂ ಆಗಿದ್ದಾರೆ.ಯುವಕೇಂದ್ರಿತ ಕಾರ್ಯಕ್ರಮಗಳು, ಸಮುದಾಯಮುಖಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದಾರೆ. ಆಯ್ಕೆಯ ನಂತರ ಮಾತನಾಡಿದ ಮುಳಿಯ ಸಾತ್ವಿಕ್, ‘ವಿದ್ಯಾರ್ಥಿಗಳ ಶಕ್ತೀಕರಣ, ಕ್ಯಾಂಪಸ್ ಅಭಿವೃದ್ಧಿ, ಮತ್ತು ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲೆಲ್ಲಾ ಸಜೀವ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಮುಂದಿನ ಗುರಿ ಎಂದು ತಿಳಿಸಿದರು. ಸುಳ್ಯ ತಾಲೂಕಿನ ಗುತ್ತಿಗಾರಿನವರಾದ ಮುಳಿಯ ಸಾತ್ವಿಕ್ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಹಾಗು ಪಲ್ಲವಿ ದಂಪತಿಗಳ ಪುತ್ರ.





