ಸುಳ್ಯ:ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 10.82 ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಅನುದಾನ ಬಿಡುಗಡೆಯಾಗಿದ್ದು ಸುಳ್ಯ ಹಾಗೂ
ಕಡಬ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಕಾಮಗಾರಿಗಳು ವಿವರ:
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕಾಣಿಯೂರು- ನಾಣಿಲ- ಚಾರ್ವಾಕ ಬರೆಪ್ಪಾಡಿ ಜಿಲ್ಲಾ ಮುಖ್ಯ ರಸ್ತೆಯ ಕಾಪೆಜಾಲು ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಒಂದು ಕೋಟಿ,ಸುಳ್ಯ-ಪೈಚಾರ್- ಬೆಳ್ಳಾರೆ-ಸವಣೂರು- ಕುದ್ಮಾರ್-ಅಲಂಕಾರು ಸುರುಳಿ-ಮಾದೇರಿ-ಪಟ್ರಮೆ- ಧರ್ಮಸ್ಥಳ-ಮುಂಡಾಜೆ- ದಿಡುಪೆ ರಸ್ತೆಯ ಕಿ.ಮೀ 32.60ರ ಬಲ ಬದಿಯಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಹಾಗೂ ಕಿ.ಮೀ 23.60ರ ಎಡ ಬದಿಯಲ್ಲಿ ಕುಸಿದ ಬಾಗಕ್ಕೆ ತಡೆಗೋಡೆ ನಿರ್ಮಿಸುವುದು ಒಂದು ಕೋಟಿ, ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಬೈತಡ್ಕದಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 50ಲಕ್ಷ,
ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಕಿ.ಮೀ.27ರಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ,ಕಡಬ ತಾಲೂಕು ಐತೂರು ಗ್ರಾಮದ ಸುಬ್ರಹ್ಮಣ್ಯ- ಉಡುಪಿ ರಾಜ್ಯ ಹೆದ್ದಾರಿ ಬೀಡು ಎಂಬಲ್ಲಿ ತಡೆಗೋಡೆ ನಿರ್ಮಾಣಕ್ಕೆ 65 ಲಕ್ಷ,ಅರಂತೋಡು-ತೋಡಿಕಾನ ರಸ್ತೆಯ ಅಡ್ಯಡ್ಕ ಎಂಬಲ್ಲಿ ತಡೆಗೋಡೆ ನಿರ್ಮಿಸುವುದು 20 ಲಕ್ಷ, ಕಡಬ ತಾಲೂಕು ಕೊಂಬಾರು ಗ್ರಾಮದ ಕರ್ಮಕಜೆ – ಬಾರ್ಯ ರಸ್ತೆಯಲ್ಲಿ ಕರ್ಮಕಜೆ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಸೇತುವೆ 50 ಲಕ್ಷ,
ಕಡಬ ತಾಲೂಕು ಕಡಬ ಹಳೇಸ್ಟೇಷನ್ ಕಡಬ ತಾಲೂಕು ಪಂಚಾಯತ್ ಹತ್ತಿರ ರಸ್ತೆ ಬದಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 90 ಲಕ್ಷ, ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಬೈಲು ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಸೇತುವೆ ನಿರ್ಮಾಣ 60 ಲಕ್ಷ, ಕಡಬ ತಾಲೂಕು ಅಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ರಸ್ತೆ ಬದಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ,
ಕಡಬ ತಾಲೂಕು ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಮ್ಮಡ್ಕ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ಮತ್ತು ಕಿರು ಸೇತುವೆ ನಿರ್ಮಾಣ 20 ಲಕ್ಷ, ಕಡಬ ತಾಲೂಕು ಮರ್ಧಾಳ ಗ್ರಾ.ಪಂ.ವ್ಯಾಪ್ತಿಯ ಪಿಲಿಮಜಲು ಎಂಬಲ್ಲಿ ರಸ್ತೆಯ ಕುಸಿದ ಭಾಗಕ್ಕೆ ತಡೆಗೋಡಿಲೆ 22 ಲಕ್ಷ, ಕಡಬ ತಾಲೂಕು ಕಾಣಿಯೂರು ಗ್ರಾಮದ ಪುಣ್ಚತ್ತಾರು-ದೋಳ್ಪಾಡಿ ರಸ್ತೆ ಬದಿ ಕಸಿದ ಭಾಗಕ್ಕೆ ತಡೆಗೋಡೆಗೆ 10 ಲಕ್ಷ,
ಸುಳ್ಯ ತಾಲೂಕು ಕಳಂಜ ಗ್ರಾಮದ ಬೆಳ್ಳಾರೆ ಶೇಣಿ ರಸ್ತೆಯ ತಂಟೆಪ್ಪಾಡಿ ಎಂಬಲ್ಲಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 50 ಲಕ್ಷ,
ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೂಟೇಲು ಸೇತುವೆಯ ಕುಸಿದ ಭಾಗಕ್ಕೆ ಸಂರಕ್ಷಣಾ ಕಾಮಗಾರಿಗೆ 50 ಲಕ್ಷ, ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ವಾಲ್ತಾಜೆ ಎಂಬಲ್ಲಿ ರಸ್ತೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 10 ಲಕ್ಷ, ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯಲ್ಲಿರುವ ಸೇತುವೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 15 ಲಕ್ಷ,
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮಠತ್ತಡ್ಕದಲ್ಲಿ ಕುಸಿದ ಭಾಗದ ಸಂರಕ್ಷಣಾ ಕಾರ್ಯ ಒಂದು ಕೋಟಿ,
ಸುಳ್ಯ ತಾಲೂಕು ಕೊಲ್ಲಮೊಗ್ರು ಗ್ರಾಮದ ಇಡ್ನೂರು ಸೇತುವೆ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣ 35 ಲಕ್ಷ, ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಬೆಳ್ಳಾರೆ- ಶೇಣಿ ರಸ್ತೆಯ ಗೌರಿಹೊಳೆ ಸೇತುವೆಯ ಕುಸಿದ ಭಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ 50 ಲಕ್ಷ, ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಜಾರಿಕೋಡಿ ಎಂಬಲ್ಲಿ ಸೇತುವೆ ಬಳಿ ಕುಸಿದ ಭಾಗಕ್ಕೆ ತಡೆಗೋಡೆ ಸಂರಕ್ಷಣಾ ಕಾಮಗಾರಿ 60 ಲಕ್ಷ ರೂ.













