ಪುತ್ತೂರು: ಬೆಂಗಳೂರಿನ ಟಿ.ಆರ್.ಎಸ್ ಶಿಕ್ಷಣ ಸಂಸ್ಥೆ ಮತ್ತು ಪುತ್ತೂರಿನ ಐ ಆರ್ ಸಿ ಎಮ್ ಡಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸುಳ್ಯ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಮಿಥಾಲಿ ಯು.ಎಲ್. ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸೋಣಂಗೇರಿ ಗುಂಡ್ಯಡ್ಕದ
ಲೋಕೇಶ್ ಉಳುವಾರು ಹಾಗೂ ಶ್ರೀಪ್ರಿಯ ಎ. ಆರ್.ದಂಪತಿಗಳ ಪುತ್ರಿ. ಕೆವಿಜಿ ಐಪಿಎಸ್ನ ನಾಲ್ಕನೇ ತರಗತಿಯ ವಿದ್ಯಾರ್ಥಿನಿ.
ಸ್ಪರ್ಧೆಯಲ್ಲಿ 250 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸುವವರ ವೇಗ ನಿಖರತೆ ಮತ್ತು ಮಾನಸಿಕ ಚುರುಕುತನವನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ 6 ನಿಮಿಷದ ಪರೀಕ್ಷೆಯನ್ನು ಇದು ಒಳಗೊಂಡಿತ್ತು. ಇವರಿಗೆ ಐ ಆರ್ ಸಿ ಎಮ್ ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲ ಗಣೇಶ್ ಹಾಗೂ ಹರ್ಷಿತಾ ಅವರು ತರಬೇತಿ ನೀಡಿರುತ್ತಾರೆ.