ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ‘ಆಟಿ ವೈಶಿಷ್ಟ್ಯ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರು, ಹಾಗೂ ಜಾನಪದ ಸಂಶೋಧಕ ಡಾ. ಸುಂದರ ಕೇನಾಜೆ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದರು.ಆಟಿ ತಿಂಗಳು ಅಂದರೆ ಹಿಂದಿನ ಕಾಲದಲ್ಲಿ ಕಷ್ಟದ ಕಾಲ ಹಾಗಾಗಿ ಆಟಿಯ ತಿಂಗಳ ಆಚರಣೆ, ತಿನಿಸುಗಳ ಹಿನ್ನೆಲೆಯನ್ನು
ತಿಳಿಯುವುದು ಅವಶ್ಯಕವಾಗಿದೆ ಮತ್ತು ಇದನ್ನು ಅಧ್ಯಯನದ ಮೂಲಕ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು. ಕರಾವಳಿಯ ಸಂಸ್ಕೃತಿ ಮತ್ತು ಆಚರಣೆಗಳು ಇತರ ಪ್ರದೇಶಗಳಿಂದ ಭಿನ್ನವಾಗಿದ್ದು ಇಲ್ಲಿಯ ಆಚರಣೆಗಳು ಹಿಂದಿನ ಕಾಲದ ಕೃಷಿಗೆ ಪೂರಕವಾಗಿರುತ್ತದೆ.ಪ್ರಸ್ತುತ ಕೃಷಿಯಿಂದ ಜನರ ಜೀವನ ಪೂರ್ತಿಯಾಗಿ ಬದಲಾಗಿದ್ದು,ಆಗಿನ ಕಾಲದ ಜನರ ಜೀವನವನ್ನು ಅರಿಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಾಂಗಾಯ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ .ಕೆ ಮತ್ತು ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ .ಪಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಸ್ವರ್ಣಕಲಾ.ಎ.ಎಸ್ ಕಾರ್ಯಕ್ರಮವನ್ನು ಸಂಘಟಿಸಿದರು. ವಿದ್ಯಾರ್ಥಿನಿಯರಾದ ತನುಜ್ಞಾ ಅತಿಥಿಗಳನ್ನು ಪರಿಚಯಿಸಿದರು. ಶ್ರೇಯಾ. ಆರ್ ಸ್ವಾಗತಿಸಿ, ದುರ್ಗಾಶ್ರೀ ವಂದಿಸಿದರು. ಶ್ರೀವಲ್ಲಿ ಕಾರ್ಯಕ್ರಮ ನಿರೂಪಿಸಿದರು.
ಆಟಿ ವೈಶಿಷ್ಟ್ಯದ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ವಿವಿಧ ಆಟಿ ತಿಂಗಳ ಖಾದ್ಯಗಳನ್ನು ಪ್ರದರ್ಶಿಸಿದರು. ನಂತರ ವಿದ್ಯಾರ್ಥಿಗಳಿಗೆ ಆಂಟಿ ತಿಂಗಳ ಖಾದ್ಯಗಳ ಮತ್ತು ತುಳುನಾಡಿನ ವಿವಿಧ ಸಾಂಸ್ಕೃತಿಕ ಕಲೆಗಳ ಸ್ಪರ್ಧೆಗಳು ನಡೆಯಿತು.





