ಸುಳ್ಯ:ಸುಳ್ಯ ಆರಂಬೂರು, ಪೆರಾಜೆ ಪರಿಸರದಲ್ಲಿ ಕಳೆದ ಹಲವು ದಿನಗಳಿಂದ 9 ಕಾಡಾನೆಗಳು ಬೀಡು ಬಿಟ್ಟಿದ್ದು, ದಿನ ನಿತ್ಯ ಕೃಷಿಕರು, ಸಾರ್ವಜನಿಕರು ಆತಂಕಲ್ಲಿದ್ದಾರೆ, ಸುಳ್ಯ ನಗರಕ್ಕೆ ಸನಿಹದಲ್ಲಿರುವ ಈ ಪ್ರದೇಶ ಗಳಲ್ಲಿ ರಾತ್ರಿಯಾಗುತ್ತಲೇ ಆನೆ ಸಂಚಾರ ಆರಂಭವಾಗುತ್ತಿದ್ದು ಇದರ ತಡೆಗೆ ಕ್ರಮ ಕೈಗೊಳ್ಳುವಂತೆ ಮತ್ತು
ಕೃಷಿ ನಾಶ ಹೊಂದಿದವರಿಗೆ ಪರಿಹಾರ ನೀಡುವಂತೆ ಪ್ರಮುಖರ ನಿಯೋಗ ಸ್ಪೀಕರ್ ಯು. ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.ತಕ್ಷಣ ಸ್ಪಂದಿಸಿದ ಸ್ಪೀಕರ್ ಅವರು ಜಿಲ್ಲಾ ಅರಣ್ಯ ಉಪ ಸoರಕ್ಷಣಾಧಿಕಾರಿ ಯವರಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಕೃಷಿಕರಾರ ಪಿ.ಬಿ. ಪ್ರಭಾಕರ ರೈ, ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ನ.ಪಂ.ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್,ಆಸಿಫ್ ಪೆರಾಜೆ ಮೊದಲಾದವರು ಇದ್ದರು.





