ಸುಳ್ಯ: ಎಲ್ಲೆಂದರಲ್ಲಿ ಸುತ್ತಾಡುವ ಬಿಡಾಡಿ ಆಡುಗಳನ್ನು ನಗರ ಪಂಚಾಯತ್ ವಶಕ್ಕೆ ಪಡೆದು ನಗರ ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಲಾಗಿದೆ. ವಾರಿಸುದಾರರು ದಂಡವನ್ನು ಕಟ್ಟಿ ಬಿಡಿಸಿಕೊಳ್ಳಬಹುದು ಎಂದು ನಗರ ಪಂಚಾಯತ್ ಪ್ರಕಟಣೆ ತಿಳಿಸಿದೆ. ಆಡುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ
ಬಿಡಬಾರದು ಎಂದು ನಗರ ಪಂಚಾಯತ್ ಈ ಹಿಂದೆಯೇ ಪ್ರಕಟಣೆ ನೀಡಿತ್ತು. ಆಡುಗಳು ನಗರದಲ್ಲಿ ಎಲ್ಲೆಂದರಲ್ಲಿ ಸುತ್ತಾಡಿ ಸಮಸ್ಯೆ ಸೃಷ್ಠಿಸುತ್ತವೆ, ವಾಹನಗಳಿಗೆ ಅಡ್ಡ ಬರುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಇದೀಗ ಮರಿಗಳು ಸೇರಿದ ಆಡುಗಳ ಹಿಂಡನ್ನು ನಗರ ಪಂಚಾಯತ್ ಸಿಬ್ಬಂದಿಗಳು ವಶಕ್ಕೆ ಪಡೆದು ನಗರ ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಲಾಗಿದೆ.