ಸುಳ್ಯ:ಸುಳ್ಯದ ಹಿರಿಯ ವಕೀಲರಾದ ಎ.ಸಿ.ನಂದನ್ (72) ಅವರು ನಿಧನರಾಗಿದ್ದಾರೆ.ಅಲ್ಪ ಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಸುಳ್ಯದ ತಮ್ಮ ಮನೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು.ಸುಮಾರು 35 ವರ್ಷಗಳ ಕಾಲ ಸುಳ್ಯದಲ್ಲಿ ವಕೀಲರಾಗಿ ಕಾರ್ಯನಿರ್ಬಹಿಸಿದ್ದರು. 1982ರಲ್ಲಿ ವಕೀಲರಾಗಿ ನೋಂದಣಿ ಮಾಡಿದ್ದ ಅವರು ಬಿ.ವಿ.ವೆಂಕಪ್ಪ ಗೌಡ ಜೂನಿಯರ್ ಆಗಿ ವಕೀಲಿ ವೃತ್ತಿ ಆರಂಭಿಸಿದರು. ಬಳಿಕ ಸುಳ್ಯದಲ್ಲಿ
ಕಚೇರಿ ತೆರೆದು ವೃತ್ತಿ ನಡೆಸಿದ್ದರು. ಸುಳ್ಯ, ಪುತ್ತೂರು, ಮಂಗಳೂರು, ಮಡಿಕೇರಿ, ಕಾಸರಗೋಡು ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡಿದ್ದರು. ಹಲವರು ಕಿರಿಯ ವಕೀಲರು ಇವರ ಜೊತೆ ವಕೀಲಿ ವೃತ್ತಿ ನಡೆಸಿದ್ದರು.ಜೆಡಿಎಸ್ ಪಕ್ಷದಲ್ಲಿ ಸಕ್ರೀಯರಾಗಿದ್ದ.ಎ.ಸಿ.ನಂದನ್ ಅವರು ಜೆಡಿಎಸ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿದ್ದರು.
ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು. ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿದ್ದರು. ಇವರ ಅಧ್ಯಕ್ಷತೆಯ ಅವಧಿಯಲ್ಲಿ ವಕೀಲರ ಸಂಘ ಬೆಳ್ಳಿ ಹಬ್ಬ ಆಚರಿಸಿತ್ತು.
ಇವರು ಪತ್ನಿ ಡಾ.ರೇವತಿ ನಂದನ್, ಪುತ್ರಿಯರಾದ ಡಾ.ತಾರಾ, ದೀಪ ಅಳಿಯಂದಿರಾದ ಡಾ.ರೋಶನ್, ರಮೇಶ್ ಹಾಗೂ ಸಂಬಂಧಿಕರನ್ನು ಅಗಲಿದ್ದಾರೆ.





