ಬೆಂಗಳೂರು:94ಸಿ ಹಕ್ಕುಪತ್ರ ವಿತರಣೆ ಸಂದರ್ಭ ಮನೆ ನಿರ್ಮಾಣದ ಸಂಬಂಧಪಟ್ಟು ದೃಢೀಕರಣ ಪತ್ರ ಕೇಳುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಎತ್ತಿದ್ದಾರೆ. ಶಾಸಕರ ಲಿಖಿತ ಪ್ರಶ್ನೆಗೆ ಕಂದಾಯ ಸಚಿವರು ನೀಡಿದ ಉತ್ತರ ಇಲ್ಲಿದೆ.
ಗ್ರಾಮೀಣ ಭಾಗದಲ್ಲಿ 94-ಸಿ ಯಡಿ ಹಕ್ಕು ಪತ್ರವನ್ನು ವಿತರಿಸುವ ಪೂರ್ವದಲ್ಲಿ ಕಂದಾಯ ಇಲಾಖೆಯವರು ಗ್ರಾಮ ಪಂಚಾಯಿತಿಯಿಂದ
2015 ಪೂರ್ವದಲ್ಲಿ ಮನೆ ನಿರ್ಮಿಸಿರುವ ಬಗ್ಗೆ ದೃಢೀಕರಣ ಪತ್ರ/ನಿರಾಕ್ಷೇಪಣಾ ಪತ್ರ ಕೇಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ.
ಇಂತಹ ದೃಢೀಕರಣ/ನಿರಾಕ್ಷೇಪಣಾ ಪತ್ರ ನೀಡಲು ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಆದೇಶ ಮಾಡಿದೆಯೇ ಎಂದು ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಲಿಖಿಲಿತವಾಗಿ ಪ್ರಶ್ನಿಸಿದ್ದಾರೆ.
ಹಕ್ಕುಪತ್ರ ನೀಡುವ ಪೂರ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಿ ವರದಿ ಸಿದ್ದಪಡಿಸುವುದು ಯಾರ
ಜವಾಬ್ದಾರಿ ಎಂದು ಶಾಸಕರು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು ‘ಗ್ರಾಮೀಣ ಭಾಗದಲ್ಲಿ 94-ಸಿ ಯಡಿ ಹಕ್ಕು ಪತ್ರವನ್ನು ವಿತರಿಸುವ ಪೂರ್ವದಲ್ಲಿ ಕಂದಾಯ ಇಲಾಖೆಯವರು -ಗ್ರಾಮ ಪಂಚಾಯಿತಿಯಿಂದ 2015ರ ಪೂರ್ವದಲ್ಲಿ – ಮನೆ ನಿರ್ಮಿಸಿರುವ ಬಗ್ಗೆ ದೃಢೀಕರಣ ಪತ್ರ/ನಿರಾಕ್ಷೇಪಣಾ ಪತ್ರ ಕೇಳುತ್ತಿರುವುದು ಸರ್ಕಾರದ – ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಆದೇಶ ಹೊರಡಿಸಿರುವುದಿಲ್ಲ.ಗ್ರಾಮೀಣ ಭಾಗದ ಸರ್ಕಾರಿ ಜಮೀನಿನಲ್ಲಿ ದಿನಾಂಕ 1-1-2015ರ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು – ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94-ಸಿ ರಡಿ ಅವಕಾಶ ಕಲ್ಪಿಸಲಾಗಿದೆ.ಆ ಸರ್ಕಾರದ ಸುತ್ತೋಲೆ ಸಂಖ್ಯೆ:ಆರ್ಡಿ 64 ಎಲ್ಜಿಪಿ 2015, ದಿನಾಂಕ 06.07.2016ರ ಸುತ್ತೋಲೆಯಲ್ಲಿ
ಅರ್ಜಿ ಸ್ವೀಕರಿಸಿದ ನಂತರ ಸ್ಥಳ ಪರಿಶೀಲನೆಗಾಗಿ ಗ್ರಾಮ ಆಡಳಿತಾಧಿಕಾರಿಗಳು/ರಾಜಸ್ವ ನಿರೀಕ್ಷಕರು/ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು/ನಗರ ಸ್ಥಳೀಯ ಅಧಿಕಾರಿಗಳೊಂದಿಗೆ ಕಚ್ಚಾ ನಕ್ಷೆ ಸಿದ್ಧಪಡಿಸಿ, ದೃಢೀಕರಿಸಿ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.









