ಸುಳ್ಯ: ರಾಜ್ಯದ ಹಲವೆಡೆ ಭಾನುವಾರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳು ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 5 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ
14 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ಶನಿವಾರ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಸುಳ್ಯ ನಗರದಲ್ಲಿ ಶನಿವಾರ ಸಂಜೆ 50 ಮಿ.ಮಿ.ಮಳೆ ಸುರಿದಿದೆ. ಬಾಳಿಲ 08 ಮಿ ಮೀ. ಕಾಸರಗೋಡಿನ ಕಲ್ಲಕಟ್ಟದಲ್ಲಿ 13ಮಿ.ಮೀ. ಗುತ್ತಿಗಾರು ಮೆಟ್ಟಿನಡ್ಕ, 27 ಮಿಮಿ, ಕಡಬ ದಲ್ಲಿ 7.50 ಮಿಮಿ, ಸುಬ್ರಹ್ಮಣ್ಯ 40 ಮಿ.ಮಿ, ದೊಡ್ಡತೋಟದ ಬಳಿ ಕಿಲಾರ್ಕಜೆಯಲ್ಲಿ
16 ಮಿ. ಮೀ.ಮಿ, ಕಲ್ಲಾಜೆ 17 ಮಿ.ಮಿ, ಅಜ್ಜಾವರ ಮುಳ್ಯ 14 ಮಿ.ಮಿ. ಮಳೆಯಾಗಿದೆ.