ನವದೆಹಲಿ: ಪಂಚ ರಾಜ್ಯ ಚುನಾವಣೆ ಮುಗಿದಿದ್ದು ವಿವಿಧ ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದೆ. ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ,ಛತ್ತೀಸ್ಗಡ ಹಾಗೂ ಮಿಝೋರಾಂ ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ.
ರಾಜಸ್ಥಾನದಲ್ಲಿ ಬಿಜೆಪಿ:
ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ವಿವರವನ್ನೂ ಬಹಿರಂಗಗೊಳಿಸಿವೆ.ಬಹುತೇಕ ಸಂಸ್ಥೆಗಳು ಬಿಜೆಪಿ ಪಕ್ಷ ನಿರ್ದಿಷ್ಟ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ವಿವಿಧ ಸಂಸ್ಥೆಗಳ ಸಮೀಕ್ಷಾ ವರದಿಗಳು ಈ ರೀತಿ ಇದೆ..
ಟಿವಿ9 ಭಾರತ ವರ್ಷ್: ಪೋಲ್ಸ್ಟ್ರಾಟ್ ಸಮೀಕ್ಷೆ
ಬಿಜೆಪಿ: 100-110
ಕಾಂಗ್ರೆಸ್: 90-100
ಜನ್ ಕೀ ಬಾತ್ ಸಮೀಕ್ಷೆ:
ಬಿಜೆಪಿ: 100-122
ಕಾಂಗ್ರೆಸ್: 90-110
ನ್ಯೂಸ್ 18 ಸಮೀಕ್ಷೆ:
ಬಿಜೆಪಿ: 111
ಕಾಂಗ್ರೆಸ್: 74
ಇತರೆ: 14
ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ:
ಬಿಜೆಪಿ: 108-128
ಕಾಂಗ್ರೆಸ್: 56-72
ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಬಿಜೆಪಿ: 80-110
ಕಾಂಗ್ರೆಸ್: 86-106
ಇತರೆ: 9-18
ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ:
ತೆಲಂಗಾಣದಲ್ಲಿ ಹಲವು ಸಮೀಕ್ಷೆಗಳಲ್ಲಿ ಆಡಳಿತಾರೂಢ ಬಿಆರ್ಎಸ್ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಹೋರಾಟವನ್ನು ಅಂದಾಜಿಸಿವೆ.
ಚುನಾಚಣೆಗೂ ಮುನ್ನ ನಡೆದಿದ್ದ ಕೆಲ ಸಮೀಕ್ಷೆಗಳು ಕಾಂಗ್ರೆಸ್ಗೆ ಸ್ಪಷ್ಟ ಬಹುಮತದ ಅಂದಾಜು ಮಾಡಿದ್ದವು. ಮತಗಟ್ಟೆ ಸಮೀಕ್ಷೆಯಲ್ಲೂ ಚಾಣಾಕ್ಯ, ಟಿವಿ9, ಜನ್ ಕೀ ಬಾತ್ ಸಮೀ ಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.
ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 60 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.
ಟಿವಿ 9 ಸಮೀಕ್ಷೆ
ಬಿಆರ್ಎಸ್: 48–58
ಕಾಂಗ್ರೆಸ್ 49–59
ಬಿಜೆಪಿ: 5-10
ಇತರರು: 6-8
ಜನ್ ಕೀ ಬಾತ್
ಬಿಆರ್ಎಸ್: 40–55
ಕಾಂಗ್ರೆಸ್: 48–64
ಬಿಜೆಪಿ: 07–13
ಎಐಎಂಐಎಂ: 04–07
ಚಾಣಾಕ್ಷ ಸಮೀಕ್ಷೆ
ಬಿಆರ್ಎಸ್: 22–31
ಕಾಂಗ್ರೆಸ್: 67–78
ಬಿಜೆಪಿ: 06–09
ಇತರರು: 06–07
ಪೋಲ್ ಸ್ಟ್ರಾಟ್ ಸಮೀಕ್ಷೆ ಬಿಆರ್ಎಸ್: 48–58
ಕಾಂಗ್ರೆಸ್: 49–59
ಬಿಜೆಪಿ: 05–10
ಎಐಎಂಐಎಂ: 06–08
ಸಿಎನ್ಎನ್ ಸಮೀಕ್ಷೆ:
ಕಾಂಗ್ರೆಸ್: 56
ಬಿಆರ್ಎಸ್: 48
ಬಿಜೆಪಿ -10
ಎಂಐಎಂ- 05
ಟೈಮ್ಸ್ ನೌ ಸಮೀಕ್ಷೆ:
ಬಿಆರ್ಎಸ್: 66
ಕಾಂಗ್ರೆಸ್ : 37
ಬಿಜೆಪಿ: 7
ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರ ಸಾಧ್ಯತೆ:
ಒಟ್ಟು 90 ಕ್ಷೇತ್ರಗಳನ್ನು ಒಳಗೊಂಡಿರುವ ಛತ್ತೀಸಗಢ ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಿತು.ಛತ್ತೀಸಗಢದಲ್ಲಿ ಕಾಂಗ್ರೆಸ್ ಆಡಳಿತವಿದೆ. ವಿವಿಧ ಸಂಸ್ಥೆಗಳು ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಗಳು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯನ್ನು ಬಲಗೊಳಿಸಿವೆ.
ಟಿವಿ9 ಸಮೀಕ್ಷೆ:
ಬಿಜೆಪಿ: 35–45
ಕಾಂಗ್ರೆಸ್: 40–50
ಇತರರು: 03
ಇಂಡಿಯಾ ಟಿವಿ– ಸಿಎನ್ಎಕ್ಸ್ ಸಮೀಕ್ಷೆ:
ಬಿಜೆಪಿ: 30–40
ಕಾಂಗ್ರೆಸ್: 46–56
ಇತರರು: 3–5
ನ್ಯೂಸ್ 18 ಜನ್ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 30
ಕಾಂಗ್ರೆಸ್: 47
ಇತರರು: 03
ಟಿವಿ 5 ಸಮೀಕ್ಷೆ ಪ್ರಕಾರ:
ಬಿಜೆಪಿ: 29–39
ಕಾಂಗ್ರೆಸ್: 54–64
ಇಂಡಿಯಾ ಟುಡೇ ಸಮೀಕ್ಷೆ:
ಬಿಜೆಪಿ: 36–46
ಕಾಂಗ್ರೆಸ್: 40–50
ಇತರರು: 1–5
ಮಧ್ಯಪ್ರದೇಶ ಅತಂತ್ರ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.230 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ನವೆಂಬರ್ 17ರಂದು ಚುನಾವಣೆ ನಡೆದಿದೆ.
ಪೋಲ್ಸ್ಟ್ರಾಟ್
ಬಿಜೆಪಿ :106–116
ಕಾಂಗ್ರೆಸ್ : 111–121
ಇತರೆ : 00–06
ಮ್ಯಾಟ್ರಿಜ್ ಸಮೀಕ್ಷೆ:
ಬಿಜೆಪಿ : 118-130
ಕಾಂಗ್ರೆಸ್ : 97-107
ಇತರೆ : 00-02
ರಿಪ್ಲಬಿಕ್ ಸಮೀಕ್ಷೆ
ಬಿಜೆಪಿ :118-130
ಕಾಂಗ್ರೆಸ್ : 97-107
ಇತರೆ : 00-02
ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ : 100-123
ಕಾಂಗ್ರೆಸ್ : 102-125
ಮಿಝೋರಾಂ ಅತಂತ್ರ:
ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ಜೆಡ್ಪಿಎಂ) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ಕಂಡ ಮಿಜೋರಾಂ ರಾಜ್ಯದ ಮತಗಟ್ಟೆ ಸಮಿಕ್ಷೆ ಹೊರಬಿದ್ದಿದ್ದು, ಅತಂತ್ರ ವಿಧಾನಸಭೆಯ ಸೂಚನೆ ಸಿಕ್ಕಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ 21 ಸ್ಥಾನ ಪಡೆದವರು ಅಧಿಕಾರದ ಗದ್ದುಗೆ ಏರುತ್ತಾರೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ
ಎಂಎನ್ಎಫ್: 14-18
ಜೆಡ್ಪಿಎಂ: 12-16
ಕಾಂಗ್ರೆಸ್: 8-10
ಬಿಜೆಪಿ: 0-2
ಜನ್ ಕಿ ಬಾತ್ ಸಮೀಕ್ಷೆ
ಜೆಡ್ಪಿಎಂ: 15 – 25
ಎಂಎನ್ಎಫ್: 10 – 14
ಕಾಂಗ್ರೆಸ್: 5 – 9
ಬಿಜೆಪಿ: 0 –2
ಇಂಡಿಯಾ ಟಿವಿ–ಸಿಎನ್ಎಕ್ಸ್
ಎಂಎನ್ಎಫ್: 14-18
ಜೆಡ್ಪಿಎಂ: 12-16
ಕಾಂಗ್ರೆಸ್: 8-10
ಬಿಜೆಪಿ: 0-2