ನವದೆಹಲಿ: ಐದು ರಾಜ್ಯಗಳ ಚುನಾವಣೆ ವೇಳಾಪಟ್ಟಿಯನ್ನು ಇಂದು ಪ್ರಕಟಗೊಳ್ಳಲಿದೆ. ಈ ಬಗ್ಗೆ ಚುನಾವಣಾ ಆಯೋಗವು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ಮಧ್ಯಪ್ರದೇಶ, ಛತ್ತೀಸ್ಗಡ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣಾ
ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
40 ಸದಸ್ಯರಿರುವ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ನಲ್ಲಿ ಕೊನೆಗೊಳ್ಳುತ್ತಿದ್ದರೆ, 90 ಸದಸ್ಯ ಬಲದ ಛತ್ತೀಸ್ಗಢ ವಿಧಾನಸಭೆ ಮತ್ತು ಮೂರು ರಾಜ್ಯಗಳ ಅವಧಿ ಜನವರಿಯಲ್ಲಿ ಕೊನೆಗೊಳ್ಳಲಿದೆ. ಮಧ್ಯಪ್ರದೇಶ (230-ಸದಸ್ಯ), ರಾಜಸ್ಥಾನ (200-ಸದಸ್ಯ), ಮತ್ತು ತೆಲಂಗಾಣ (119-ಸದಸ್ಯ) ವಿಧಾನಸಭೆಗಳಿಗೂ ಮುಂಬರುವ ವಾರಗಳಲ್ಲಿ ಚುನಾವಣೆ ನಡೆಯಲಿದೆ.ಚುನಾವಣಾ ಆಯೋಗವು ಕಳೆದ ಎರಡು ತಿಂಗಳಿನಿಂದ ಐದು ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿವೆ.