ಅಹಮದಾಬಾದ್: ಶತಕ ದಾಖಲಿಸಿದ ಶುಭಮನ್ ಗಿಲ್ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಎದುರು ಭಾರತ ಉತ್ತಮ ಮೊತ್ತ ಪೇರಿಸಲು ನೆರವಾದರು. ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ ಗಳಿಸಿರುವ 480 ರನ್ಗಳಿಗೆ ಉತ್ತರವಾಗಿ ಆಡುತ್ತಿರುವ ಆತಿಥೇಯ ತಂಡವು ಶನಿವಾರ ದಿನದಾಟದ
ಮುಕ್ತಾಯಕ್ಕೆ 3 ವಿಕೆಟ್ಗಳಿಗೆ 289 ರನ್ ಗಳಿಸಿದೆ.
ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ (ಬ್ಯಾಟಿಂಗ್ 59; 128ಎ, 4X5) ಹಾಗೂ ರವೀಂದ್ರ ಜಡೇಜ (16; 54ಎ, 6X1) ಕ್ರೀಸ್ನಲ್ಲಿದ್ದಾರೆ. ಭಾರತದ ಆರಂಭಿಕ ಬ್ಯಾಟರ್ ಶುಭಮನ್ (128; 235ಎ, 4X12, 6X1) ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಅಲ್ಲದೇ ಒಂದೇ ವರ್ಷದಲ್ಲಿ ಮೂರು ಮಾದರಿಗಳಲ್ಲಿಯೂ ಶತಕ ಗಳಿಸಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಟೈಮಿಂಗ್, ರಿವರ್ಸ್ ಸ್ವೀಪ್, ಡ್ರೈವ್ ಮತ್ತು ಕಟ್ಗಳ ಮೂಲಕ ರನ್ಗಳನ್ನು ಗಳಿಸಿದರು.
ಸ್ಕೋರ್ ಕಾರ್ಡ್
ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 480 (167.2 ಓವರ್) ಭಾರತ 3ಕ್ಕೆ 289 (99 ಓವರ್)
ರೋಹಿತ್ ಶರ್ಮ, 35 (58ಎ, 4X3, 6X1), ಶುಭಮನ್ 128 (235ಎ, 4X12, 6X1), ಚೇತೇಶ್ವರ ಪೂಜಾರ 42 (121ಎ, 4X3), ವಿರಾಟ್ ಕೊಹ್ಲಿ ಬ್ಯಾಟಿಂಗ್ 59 (128ಎ, 4X5), ಜಡೇಜ ಬ್ಯಾಟಿಂಗ್ 16 (54ಎ, 6X1)