ಅಹಮದಾಬಾದ್: ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಸಿಡಿಸಿದ ಆಕರ್ಷಕ ಶತಕದ(ಔಟಾಗದೆ 104 ರನ್, 251 ಎಸೆತ, 15 ಬೌಂಡರಿ) ನೆರವಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆ ಹಾಕಿದೆ. ಗುರುವಾರ ಟಾಸ್ ಜಯಿಸಿದ ಆಸ್ಟ್ರೇಲಿಯಾ ಮೊದಲು
ಬ್ಯಾಟಿಂಗ್ ಆಯ್ದುಕೊಂಡಿತು. ಟ್ರಾವಿಸ್ ಹೆಡ್(32 ರನ್)ಹಾಗೂ ಖ್ವಾಜಾ ಮೊದಲ ವಿಕೆಟಿಗೆ 61 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಲ್ಯಾಬುಶೇನ್(3) ಹಾಗೂ ಪೀಟರ್ ಹ್ಯಾಂಡ್ಸ್ಕಾಂಬ್(17 ರನ್) ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ತಂಡವನ್ನು ಆಧರಿಸಿದ ಖ್ವಾಜಾ ನಾಯಕ ಸ್ಟೀವನ್ ಸ್ಮಿತ್(38 ರನ್)ಜೊತೆ 3ನೇ ವಿಕೆಟಿಗೆ 79 ರನ್ ಸೇರಿಸಿದರು. ಖ್ವಾಜಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್(ಔಟಾಗದೆ 49, 64 ಎಸೆತ) 5ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 85 ರನ್ ರನ್ ಸೇರಿಸಿದರು.
ಭಾರತದ ಪರ ಮುಹಮ್ಮದ್ ಶಮಿ(2-65)ಎರಡು ವಿಕೆಟ್ ಪಡೆದರು. ಆರ್.ಅಶ್ವಿನ್(1-57) ಹಾಗೂ ರವೀಂದ್ರ ಜಡೇಜ(1-49)ತಲಾ ಒಂದು ವಿಕೆಟ್ಗಳನ್ನು ಪಡೆದರು.