ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ನಾಲ್ಕನೇ ಪಂದ್ಯವು ರದ್ದುಗೊಂಡಿದೆ.ಲಖನೌನಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯವು ಭಾರಿ ಮುಸುಕು ಹಾಗೂ
ವಿಪರೀತ ಮಂಜು ಕವಿದ ವಾತಾವರಣವಿದಿದ್ದರಿಂದ ಟಾಸ್ ಕೂಡ ಆಗದೇ ರದ್ದುಗೊಂಡಿತು.9.25ರ ತನಕ ತಪಾಸಣೆ ಮಾಡಿದರೂ, ವಾತಾವರಣವು ತಿಳಿಯಾಗದ ಕಾರಣ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್ ಅವರು ಪಂದ್ಯವನ್ನು ರದ್ದುಗೊಳಿಸಿದರು.
ಆತಿಥೇಯ ಭಾರತ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2–1ರಿಂದ ಮುನ್ನಡೆಯಲ್ಲಿದೆ. ಮುಂದಿನ ಪಂದ್ಯವು ಡಿ.19ರಂದು ಅಹಮದಾಬಾದ್ನಲ್ಲಿ ಜರುಗಲಿದೆ. ಈ ಮಧ್ಯೆ ಇಂದಿನ ಪಂದ್ಯಕ್ಕೂ ಮುನ್ನ ಗಾಯಾಳಾಗಿದ್ದ ಉಪನಾಯಕ ಶುಭಮನ್ ಗಿಲ್ ಅವರು ಟೂರ್ನಿಯಿಂದ ಹೊರಬಿದಿದ್ದಾರೆ.













