ಗುವಾಹಟಿ: ಭಾರತ ವಿರುದ್ದದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಉತ್ತಮ ಮೊತ್ತ ಕಲೆಹಾಕುವತ್ತ ಸಾಗಿದ್ದಾರೆ.ಎರಡನೇ ಟೆಸ್ಟ್ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.ಮೊದಲ ದಿನದ ಅಂತ್ಯಕ್ಕೆ
81.5 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದೆ.ತಾಳ್ಮೆಯ ಆಟವಾಡುವ ಮೂಲಕ ಭಾರತೀಯ ಬೌಲರ್ಗಳನ್ನು ಕಾಡಿದರು.ಆರಂಭಿಕ ಆಟಗಾರರಾದ ಏಡೆನ್ ಮಾರ್ಕರಂ 38 ರನ್ (81 ಎಸೆತ) ಹಾಗೂ ರಯಾನ್ ರಿಕೆಲ್ಟನ್ 35 ರನ್ (82 ಎಸೆತ) ಉತ್ತಮ ಆರಂಭ ಒದಗಿಸಿದರು.ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್ 49 ರನ್ (122 ಎಸೆತ) ತೆಂಬ ಬವುಮಾ 41 ರನ್ ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.
ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿದರು. ಸಿರಾಜ್, ಬೂಮ್ರಾ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದರು.













