ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಭಾರತ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಎರಡನೇ ಇನ್ನೀಂಗ್ಸ್ನಲ್ಲಿ ಗೆಲುವಿಗೆ 115 ರನ್ ಗುರಿ ಪಡೆದ ಭಾರತ 4 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಗವಾಸ್ಕರ್- ಬೋರ್ಡರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ. ಇದಕ್ಕೂ ಮೊದಲು

ಸ್ಪಿನ್ನರ್ ಗಳಾದ ರವೀಂದ್ರ ಜಡೇಜ (7-42) ಹಾಗೂ ಆರ್. ಅಶ್ವಿನ್( 3-59) ಬೌಲಿಂಗ್ ದಾಳಿಗೆ ಕುಸಿದ ಆಸ್ಟ್ರೇಲಿಯ ತಂಡ ಎರಡನೇ ಇನ್ನೀಂಗ್ಸ್ನಲ್ಲಿ 113 ರನ್ಗಳಿಗೆ ಆಲ್ ಓಟ್ ಆಯಿತು. ಒಂದು ವಿಕೆಟ್ ನಷ್ಟನ್ನು 61 ರನ್ ನಿಂದ 3ನೇ ದಿನ 2ನೇ ಇನ್ನೀಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡ 31.1 ಓವರ್ ಗಳಲ್ಲಿ 113 ರನ್ ಗೆ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 1 ರನ್ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯವು ಭಾರತಕ್ಕೆ 115 ರನ್ ಗುರಿ ನೀಡಿತು.
ಆಸ್ಟ್ರೇಲಿಯದ ಪರ ಟ್ರಾವಿಸ್ ಹೆಡ್43 ರನ್ ಸರ್ವಾಧಿಕ ಸ್ಕೋರ್ ಗಳಿಸಿದರು. ಲ್ಯಾಬುಶೇನ್ 35 ಸ್ಕೋರ್ ಗಳಿಸಿದರು. ಆಸ್ಟ್ರೇಲಿಯ ಕೇವಲ 53 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡಿತು. ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜ 7 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನೀಂಗ್ಸ್ನಲ್ಲಿ ಭಾರತದ ಪರ ಚೇತೇಶ್ವರ ಪೂಜಾರ ಅಜೇಯ 31, ಶ್ರೀಕರ್ ಭರತ್ ಅಜೇಯ 23 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮ 31, ವಿರಾಟ್ ಕೊಹ್ಲಿ 20, ಶ್ರೇಯಸ್ ಅಯ್ಯರ್ 12, ಕೆ.ಎಲ್.ರಾಹುಲ್ 1 ರನ್ ಗಳಿಸಿ ಔಟ್ ಆದರು.