ಪೋರ್ಟ್ ಆಫ್ ಸ್ಪೇನ್: ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ನಾಯಕ ಕ್ರೆಗ್ ಬ್ರಾತ್ವೇಟ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಹೋರಾಟದ ಮೊತ್ತ ಕಲೆ ಹಾಕಿದೆ.ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ ಗಳಿಸಿರುವ
438 ರನ್ಗಳಿಗೆ ಉತ್ತರವಾಗಿ ಆಡುತ್ತಿರುವ ಆತಿಥೇಯ ತಂಡವು ಮೂರನೇ ದಿನದ ಅಂತ್ಯಕ್ಕೆ 108 ಓವರ್ಗಳಲ್ಲಿ 5 ವಿಕೆಟ್ಗಳಿಗೆ 229 ರನ್ ಗಳಿಸಿದ್ದು ಇನ್ನೂ 209 ರನ್ಗಳ ಹಿನ್ನಡೆಯಲ್ಲಿದೆ.ಪದಾರ್ಪಣೆ ಪಂದ್ಯ ಆಡುತ್ತಿರುವ ಮುಕೇಶ್ ಕುಮಾರ್ ಮತ್ತು ಸ್ಪಿನ್ನರ್ ಆರ್.ಅಶ್ವಿನ್ ತಲಾ ಒಂದು ವಿಕೆಟ್ ಗಳಿಸಿದರು. ರವೀಂದ್ರ ಜಡೇಜ ಎರಡು ವಿಕೆಟ್ ಪಡೆದರು.
ವಿಂಡೀಸ್ ಪರ ಕ್ರೇಗ್ ಬ್ರಾತ್ವೇಟ್ 75, ತೇಜನಾರಾಯಣ ಚಂದ್ರಪಾಲ್ 33, ಕಿರ್ಕ್ ಮೆಕೆಂಜಿ 32, ಜರ್ಮೈನ್ ಬ್ಲಾಕ್ವುಡ್ 20, ಡಿ ಸಿಲ್ವಾ 10, ಅಲಿಕ್ ಅಥನೇಜ್ ಬ್ಯಾಟಿಂಗ್ 37, ಹೊಲ್ಡರ್ ಬ್ಯಾಟಿಂಗ್ 11 ರನ್ ಗಳಿಸಿದರು.