ಸುಳ್ಯ:ಮಾಡಾವು ಉಪಕೇಂದ್ರದಿಂದ ಸುಳ್ಯಕ್ಕೆ ಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
110/33/11ಕೆ.ವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ಪ್ರಸ್ತುತ
ಎರಡು 20MVA ಪರಿವರ್ತಕಗಳಿದ್ದು ಈ ಪೈಕಿ ಒಂದು 20MVA ಪರಿವರ್ತಕ ಮೂಲಕ 33KV ಕಾವು ಮತ್ತು ಸುಳ್ಯಹಾಗೂ ಇನ್ನೊಂದು ಪರಿವರ್ತಕದ ಮೂಲಕ ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರ ಗಳಿಗೆ ವಿದ್ಯುತ್ ವಿತರಣಾ ವ್ಯವಸ್ಥೆ ಇರುತ್ತದೆ,ಪ್ರಸ್ತುತ ಕಾವು ಮತ್ತು ಸುಳ್ಯ ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ ಒಟ್ಟು 35MVA ಆಗಿದ್ದು ಬೆಳ್ಳಾರೆ ಹಾಗೂ ಗುತ್ತಿಗಾರು ಉಪಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 27.5MVA ಆಗಿರುತ್ತದೆ.ಮಾಡಾವು ಉಪಕೇಂದ್ರದ ಎರಡೂ 20MVA ಪರಿವರ್ತಕಗಳು ಓವರ್ ಲೋಡ್ ನಿಂದ ಕೂಡಿದ್ದು ಪ್ರಸಕ್ತ ವರ್ಷ ಬೇಸಿಗೆ ಅವಧಿಯಲ್ಲಿ ಸದರಿ ಪರಿವರ್ತಕಗಳ ಮೂಲಕ ಈ ಮೇಲಿನ ನಾಲ್ಕು ಉಪಕೇಂದ್ರಗಳಿಗೆ ವಿದ್ಯುತ್ ಧಾರಣೆ ಮಾಡುವುದು ಕಷ್ಟ ಸಾಧ್ಯವಾಗಲಿದೆ ಅಲ್ಲದೇ ಲೋ ವೋಲ್ಟೇಜ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಸುಳ್ಯವು ಅಭಿವೃದ್ದಿ ಹೊಂದುತ್ತಿರುವ ನಗರವಾಗಿದ್ದು ಈಗಿರುವ ಮೂಲಸೌಕರ್ಯದ ಮೂಲಕ ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕ ಪೂರೈಕೆ ಮಾಡಲು ಅಸಾಧ್ಯವಾಗುತ್ತದೆ. ಆದ್ದುದರಿಂದ ಮಾಡಾವಿನಲ್ಲಿ ಹೆಚ್ಚುವರಿಯಾಗಿ ಒಂದು ಸಂಖ್ಯೆಯ 20MVA ಪರಿವರ್ತಕ
ಅಳವಡಿಸಿದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಅಲ್ಲದೇ ಈಗಾಗಲೇ ಬೆಳ್ಳಾರೆ ಯಿಂದ ಸುಳ್ಯಕ್ಕೆ ಭೂಗತ ಕೇಬಲ್ ಅಳವಡಿಸಿಕೊಂಡು 33ಕೆವಿ ಲಿಂಕ್ ಲೈನ್ ನಿರ್ಮಾಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು ಮಾಡಾವಿನಲ್ಲಿ 20mva ಪರಿವರ್ತಕ ಹೆಚ್ಚುವರಿಯಾಗಿ ಅಳವಡಿಸಿದಲ್ಲಿ ಈ ಭೂಗತ ಕೇಬಲ್ ಮೂಲಕ ಸುಳ್ಯಕ್ಕೆ ಅಡಚಣೆ ರಹಿತ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡಬಹುದಾಗಿರುತ್ತದೆ.ಆದ್ದುದರಿಂದ ಮಾಡವಿನಲ್ಲಿ ಹೆಚ್ಚುವರಿಯಾಗಿ 20mva ಪರಿವರ್ತಕ ಅಳವಡಿಸಲು ಕ್ರಮ ಕೈಗೊಳ್ಳಲು ಮನವಿಯಲ್ಲಿ ವಿನಂತಿಸಲಾಗಿದೆ.
ಸಂಪಾಜೆ 33 ಕೆವಿ ಸಬ್ಸ್ಟೇಷನ್:
ಸಂಪಾಜೆ ಗ್ರಾಮದ ರಾಜಾರಾಮಪುರ
ದಲ್ಲಿ ಸ್ಥಾಪಿಸಲು ಯೋಜಿಸಲಾಗಿರುವ 2×5 MVA 33/11 ಕಿ.ವಿ. ಉಪಕೇಂದ್ರ ಮತ್ತು ಸಂಬಂಧಿಸಿದ ವಿತರಣಾ ಜಾಲಗಳ ಕಾಮಗಾರಿ ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಲು ಶಾಸಕರು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.





