ಲಖನೌ: ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 40 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 249 ರನ್ ಗಳಿಸಿದೆ. ಆ ಮೂಲಕ ಭಾರತದ ಗೆಲುವಿಗೆ 40 ಓವರ್‌ಗಳಲ್ಲಿ 250 ರನ್ ಗುರಿ ನೀಡಿದೆ. ಮೂರು ಪಂದ್ಯಗಳ ಸರಣಿಯ ಮಿದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ಪಡೆಗೆ ಜೇನ್ಮೆನ್
ಮಲಾನ್ ಹಾಗೂ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 49 ರನ್ ಕೂಡಿಸಿದರು.ಮಲಾನ್ (22) ಔಟಾದ ಬಳಿಕ ಬಂದ ನಾಯಕ ತೆಂಬಾ ಬವುಮಾ (8) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಏಡನ್ ಮರ್ಕರಂ (0) ಸಹ ನಿರಾಶೆ ಮೂಡಿಸಿದರು.
ಈ ಹಂತದಲ್ಲಿ ಕ್ವಿಂಟನ್‌ಗೆ (48) ಜೊತೆಯಾದ ಹೆನ್ರಿಚ್ ಕ್ಲಾಸನ್ ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದರು.ಕ್ವಿಂಟನ್ ವಿಕೆಟ್ ಪತನದ ನಂತರ ಬಂದ ಡೇವಿಡ್ ಮಿಲ್ಲರ್ ಆಫ್ರಿಕಾ ಇನಿಂಗ್ಸ್‌ಗೆ ಬಲ ತುಂಬಿದರು. ಕ್ಲಾಸನ್ ಜೊತೆಗೂಡಿ ಮುರಿಯದ ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 149 ರನ್ ಸೇರಿದರು.ಕ್ಲಾಸನ್ 65 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 74 ರನ್ ಗಳಿಸಿದರೆ, ಮಿಲ್ಲರ್ 63 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 75 ರನ್ ಸಿಡಿಸಿದರು. ಹೀಗಾಗಿ ಭಾರತಕ್ಕೆ ಸವಾಲಿನ ಗುರಿ ಎದುರಾಗಿದೆ. ಭಾರತ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಕಿತ್ತರು. ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಮಳೆಯಿಂದಾಗಿ ಪಂದ್ಯವನ್ನು 40 ಓವರ್‌ಗೆ ಇಳಿಸಲಾಗಿದೆ.