ಸುಳ್ಯ:ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 1998ರಿಂದ 1991ರ ತನಕ ಅಧ್ಯಯನ ನಡೆಸಿದ ಬಿಕಾಂ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಎನ್ಎಂಸಿಯ
ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಬಾಲಚಂದ್ರ ಗೌಡ, ಮೇಜರ್ ಗಿರಿಧರ ಗೌಡ, ಡಾ.ಯಶೋದ ರಾಮಚಂದ್ರ ಅವರು ಮುಖ್ಯ ಅತಿಥಿಗಳಾಗಿದ್ದರು. 1991ಬ್ಯಾಚ್ನ ರಾಯಲ್ ಬಿಕಾಂ ಗ್ರೂಪ್ನ ಸುಮಾರು 40 ಮಂದಿ 33 ವರ್ಷಗಳ ಬಳಿಕ ನಡೆದ ಸ್ನೇಹ ಸಮ್ನಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರಸ್ಪರ ಅನುಭವಗಳನ್ನು, ನೆನಪುಗಳನ್ನು ಹಂಚಿಕೊಂಡರು.1991 ಬ್ಯಾಚ್ನಲ್ಲಿ ಪದವಿ ಪಡೆದ ಮಧುಸೂದನ್, ಪಥುಮನಾಭನ್, ಜಯರಾಮ ಗೌಡರಮನೆ, ಅಬ್ದುಲ್ ಲತೀಫ್, ಪನ್ನೀರ್ ಸೆಲ್ವಂ, ಷಣ್ಮುಕ ವಡಿವ್ ಮತ್ತಿತರರು ಮಾತನಾಡಿದರು. ಗೀತಾದೇವಿ ಸಮಾರೋಪ ಭಾಷಣ ಮಾಡಿದರು.
3 ದಶಕಗಳ ಹಿಂದೆ ಒಟ್ಟಿಗೆ ಅಧ್ಯಯನ ನಡೆಸಿ ಬಳಿಕ ಬೇರ್ಪಟ್ಟು ಉದ್ಯೋಗ, ಕೃಷಿ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿದು ಸಮಾಜದ ವಿವಿಧ ಸ್ತರಗಳಲ್ಲಿ ಜೀವನ ನಡೆಸುತ್ತಿರುವ ಈ ಸಹಪಾಠಿಗಳು ವಾಟ್ಸಾಪ್ ಗ್ರೂಪ್ ಮೂಲಕ ಸಂವಹನ ಸಾಧಿಸಿ ಮತ್ತೆ ಒಟ್ಟು ಸೇರಿದರು.ಸ್ನೇಹ ಸಮ್ಮಿಲನ ನಡೆಸುವ ಮೂಲಕ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಒರಗೆ ಹಚ್ಚಿದರು.