ಸುಳ್ಯ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 12ನೇ ವರ್ಷದ ಆಕರ್ಷಕ ಸುಳ್ಯ ಮೊಸರು ಕುಡಿಕೆ ಉತ್ಸವ ಹಾಗೂ ವೈಭವದ ಶೋಭಾ ಯಾತ್ರೆ ಸುಳ್ಯ ನಗರದಲ್ಲಿ ನಡೆಯುತಿದೆ. ಯುವಕರ ತಂಡದಿಂದ ಪಿರಮಿಡ್ ಆಕಾರದ ಮಾನವ ಗೋಪುರ ನಿರ್ಮಿಸಿ ಸಾಹಸಮಯವಾಗಿ ಕ್ಷಣ ಮಾತ್ರದಲ್ಲಿ
ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ಮೈ ನವಿರೇಳಿಸುತಿದೆ. ನಗರದ
17 ಕಡೆ ಸ್ಥಾಪಿಸಲಾದ ಅಟ್ಟಿಮಡಿಕೆ ಒಡಯುವ ಸಾಹಸಮಯ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.11 ತಂಡಗಳು ಭಾಗವಹಿಸುತಿದೆ. ಬಾಲಕೃಷ್ಣನ ಭಾವಚಿತ್ರ ಹೊತ್ತ ಟ್ಯಾಬ್ಲೋಗಳು, ಚೆಂಡೆ, ಮೇಳ, ವಾದ್ಯ ಘೋಷಗಳು, ಗೊಂಬೆ ಕುಣಿತ, ಕೀಲು ಕುದಿರೆ, ಆಕರ್ಷಕ ವೇಷಗಳು, ಕುಣಿತ ಭಜನೆಯ ಜೊತೆಗೆ ನೂರಾರು ಯುವಕರ ತಂಡ ಶೋಭಾ ಯಾತ್ರೆಗೆ ಮೆರುಗು ತಂದಿದೆ.ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು

ಅಂಬೆಟೆಡ್ಕ, ಕೆ.ವಿ.ಜಿ ವೃತ್ತ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಜ್ಯೋತಿ ವೃತ್ತಗಳಲ್ಲಿ ಸ್ಥಾಪಿಸಿದ ಅಟ್ಟಿ ಮಡಿಕೆ ಒಡೆದು ಮುಂದುವರಿದಿರುವ
ಶೋಭಾಯಾತ್ರೆ ಮುಖ್ಯ ರಸ್ತೆಯ ಮೂಲಕ ಗಾಂಧಿನಗರದ ತನಕ ಸಾಗಿ ಅಲ್ಲಿಂದ ರಥಬೀದಿಯಾಗಿ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನಗೊಳ್ಳಲಿದೆ. ವಿಶೇಷ ಆಕರ್ಷಣೆಯಾಗಿ ದೇವಸ್ಥಾನದ ಬಳಿ ಅಟ್ಟಿ ಮಡಿಕೆ ಒಡೆಯುವ ಪ್ರದರ್ಶನ ನಡೆಯಲಿದೆ.

ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ತೆಂಗಿನಕಾಯಿ ಒಡೆದು ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಡಿಕೆ ಒಡೆದು, ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಕೇಸರಿ ಧ್ವಜ ಹಾರಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಕೋಶಾಧಿಕಾರಿ ನವೀನ್ ಎಲಿಮಲೆ, ಉಪಾಧ್ಯಕ್ಷರಾದ

ಸೋಮಶೇಖರ ಪೈಕ, ಹರಿಪ್ರಸಾದ್ ಸುಲಾಯ,
ವ್ಯವಸ್ಥಾ ಪ್ರಮುಖರಾದ ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ, ಉಪೇಂದ್ರ ನಾಯಕ್, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಪ್ರಮುಖರಾದ
ಸುಬೋದ್ ಶೆಟ್ಟಿ ಮೇನಾಲ, ಜಯಪ್ರಕಾಶ್ ಕುಂಚಡ್ಕ, ಸುನಿಲ್ ಕೇರ್ಪಳ, ತಿಮ್ಮಪ್ಪ ನಾವೂರು, ದೇವಿಪ್ರಸಾದ್ ಅತ್ಯಾಡಿ, ಪ್ರಕಾಶ್ ಯಾದವ್, ರವಿಚಂದ್ರ ಕೊಡಿಯಾಲಬೈಲು, ಸತೀಶ್ ಟಿ.ಎನ್ ಕಲ್ಮಕ್ಕಾರು, ಮತ್ತಿತರರು ಉಪಸ್ಥಿತರಿದ್ದರು. ಗಿರೀಶ್ ಕುಂಠಿನಿ ಹಾಗೂ ತೀರ್ಥೇಶ್ ಕಾರ್ಯಕ್ರಮ ನಿರೂಪಿಸಿದರು.







