ಸುಳ್ಯ:ಸುಳ್ಯದ ಬಹು ನಿರೀಕ್ಷಿತ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಆರಂಭಗೊಂಡಿದೆ.ಸುಳ್ಯದ ಮೆಸ್ಕಾಂ ಕಚೇರಿ ಬಳಿಯಲ್ಲಿರುವ 3 ಎಕ್ರೆಗೂ ಮಿಕ್ಕಿ ಜಾಗದಲ್ಲಿ110 ಕೆವಿ ಸಬ್ ಸ್ಟೇಷನ್ ಕಾಮಗಾರಿ ನಡೆಯಲಿದೆ. ಈ ಸ್ಥಳ ಸಮತಟ್ಟು ಮಾಡುವ ಕೆಲಸ ನಡೆಯುತಿದೆ. ಹಳೆಯ ಕ್ವಾರ್ಟರ್ಸ್ಗಳ ಕೆಡವಿ ಸಮತಟ್ಟು ಮಾಡಲಾಗುತಿದೆ. ಕೆಳ ಭಾಗದಲ್ಲಿ

ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿ ನಡೆಯಲಿದೆ.110 ಕೆವಿ ಸಬ್ ಸ್ಟೇಷನ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿ ಈಗ ಕಾಮಗಾರಿ ಆರಂಭಗೊಂಡಿದೆ. 46.20 ಕೋಟಿ ವೆಚ್ಚದಲ್ಲಿ ಹೊಸ ಸಬ್ ಸ್ಟೇಷನ್ ಮತ್ತು ಲೈನ್ ನಿರ್ಮಾಣವಾಗಲಿದೆ. 110 ಕೆವಿ ಲೈನ್ ಕಾರಿಡಾರ್ 22 ಕಿ.ಮಿ.ಉದ್ದವಿದೆ. ಹೊಸ ಲೈನ್ ಮತ್ತು ಸುಳ್ಯದಲ್ಲಿ ಹೊಸ ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. ಮಾಡಾವು-ಕೊಳ್ತಿಗೆ, ಪೆರ್ಲಂಪಾಡಿ, ಕಾಣಿಯೂರು ಸರಹದ್ದಿನ ಮೂಲಕ ಕನಕಮಜಲು ಜಾಲ್ಸೂರು ಬೈತ್ತಡ್ಕ-ಅಜ್ಜಾವರ ಮೂಲಕ ಹೊಸ ಲೈನ್ ಹಾದು ಬರಲಿದೆ. ಈಗಿನ ಮೆಸ್ಕಾಂ 33 ಕೆವಿ ಸಬ್ ಸ್ಟೇಷನ್ ಸಮೀಪ ಹೊಸ 110 ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. 22 ಮೀಟರ್ನ ಕಾರಿಡಾರ್ ನಿರ್ಮಾಣ ಮಾಡಲಾಗುವುದು.









