ಸುಳ್ಯ:ಸುಳ್ಯದಲ್ಲಿ ಆರಂಭಗೊಂಡಿರುವ 110 ಕೆವಿ ವಿದ್ಯುತ್ ಸಬ್ಸ್ಟೇಷನ್ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ವೀಕ್ಷಿಸಿದರು. ಕೆಪಿಟಿಸಿಎಲ್ ಇಂಜಿನಿಯರ್ಗಳು ಹಾಗೂ ಪ್ರಮುಖರ ಜೊತೆ ಮೆಸ್ಕಾಂ ಕಚೇರಿ ಸಮೀಪ 4 ಎಕ್ರೆ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು. ಕೆಪಿಟಿಸಿಎಲ್ ಇಂಜಿನಿಯರ್ಗಳು ಕಾಮಗಾರಿಯ ವಿವರಗಳನ್ನು ಶಾಸಕರಿಗೆ ವಿವರಿಸಿದರು. 4 ಎಕ್ರೆ ಸ್ಥಳದಲ್ಲಿ ಸಬ್ಸ್ಟೇಷನ್ನ
3 ಪವರ್ ಟ್ರಾನ್ಸ್ಫಾರ್ಮರ್ಗಳು ಮತ್ತಿತರ ನಿರ್ಮಾಣ ಕಾಮಗಾರಿಗಳು, 22 ಕಿ.ಮಿ.ಸಬ್ಸ್ಟೇಷನ್ ಲೈನ್ ಕಾಮಗಾರಿ ನಡೆಯಲಿದೆ. 40 ಕೋಟಿ ರೂ ವೆಚ್ಚದಲ್ಲಿ 110 ಕೆವಿ ಸಬ್ಸ್ಟೇಷನ್ ಹಾಗೂ ಸಬ್ಸ್ಟೇಷನ್ ಲೈನ್ ಕಾಮಗಾರಿ ನಡೆಯಲಿದೆ. ಒಂದು ವರ್ಷ ನಿರ್ಮಾಣ ಅವಧಿ ನೀಡಲಾಗಿದೆ ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ. ಕಾಮಗಾರಿಗೆ ವೇಗ ಹೆಚ್ಚಿಸಿ ನಿರ್ದಿಷ್ಟ ಸಮಯದೊಳಗೆ ಕಾಮಗಾರಿ ಮುಗಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.

ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್, ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್) ಅವಿನಾಶ್ ಕೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿವೇಕಾನಂದ ಶೆಣೈ, ಗುತ್ತಿಗೆ ವಹಿಸಿಕೊಂಡಿರುವ ಹೈದರಾಬಾದ್ನ ಸಿಎಂಆರ್ಎಂ ಇನ್ಪ್ರಾ ಇಂಜಿನಿಯರಿಂಗ್ ಪ್ರೈ.ಲಿ. ಕಂಪೆನಿಯ ಚಂದ್ರಶೇಖರ ರೆಡ್ಡಿ ಅವರು ಕಾಮಗಾರಿಯ ವಿವರ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಮಹೇಶ್ ಕುಮಾರ್ ಮೇನಾಲ, ಶ್ರೀನಾಥ್ ಬಾಳಿಲ, ಸುನಿಲ್ ಕೇರ್ಪಳ ಸುಪ್ರಿತ್ ಮೋಂಟಡ್ಕ, ಅಶೋಕ್ ಅಡ್ಕಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





