ಸುಳ್ಯ:ಸುಳ್ಯದಲ್ಲಿ ಆರಂಭಗೊಂಡ 110 ಕೆ.ವಿ.ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಯನ್ನು ವಿಧಾನಸಭಾ ಚುನಾವಣೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಆಗಮಿಸಿ ವೀಕ್ಷಣೆ ಮಾಡಿ ಮಾಹಿತಿ ಪಡೆದರು.
ಸುಳ್ಯದ ಮೆಸ್ಕಾಂ ಕಚೇರಿ ಬಳಿಯಲ್ಲಿ 3 ಎಕ್ರೆಗೂ ಮಿಕ್ಕಿ ಜಾಗದಲ್ಲಿ110 ಕೆವಿ ಸಬ್ ಸ್ಟೇಷನ್ ಕಾಮಗಾರಿ ನಡೆಯುತಿದೆ.ವಿಧಾನಸಭಾ ಕ್ಷೇತ್ರದ
ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು. ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ.ಹನೀಫ, ಧರ್ಮಪಾಲ ಕೊಯಿಂಗಾಜೆ, ಗಣೇಶ್ ನಾಗಪಟ್ಟಣ,ಆದಂ ಕಡಬ ಉಪಸ್ಥಿತರಿದ್ದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್, ಸಹಾಯಕ ಇಂಜಿನಿಯರ್ ಹರಿಕೃಷ್ಣ, ಸಹಾಯಕ ಇಂಜಿನಿಯರ್(ತಾಂತ್ರಿಕ) ನಿವ್ಯಾ ಉಪಸ್ಥಿತರಿದ್ದರು.
110 ಕೆವಿ ಸಬ್ಸ್ಟೇಷನ್ ಪೂರ್ತಿ ಮಾಡಲು ಎಲ್ಲರ ಸಹಕಾರ ಬೇಕು: ಜಿ.ಕೃಷ್ಣಪ್ಪ
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ 110 ಕೆವಿ ಸಬ್ ಸ್ಟೇಷನ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿ ಕಾಮಗಾರಿ ಆದೇಶ ಆಗಿದೆ. ಇದೀಗ ಕಾಮಗಾರಿ ಆರಂಭಗೊಂಡಿದೆ. ಗುಣಮಟ್ಟದ ಕಾಮಗಾರಿ ನಿರ್ದಿಷ್ಟ ಸಮಯದ ಒಳಗೆ ಪೂರ್ತಿ ಮಾಡಬೇಕು. ಕಾಮಗಾರಿ ಪೂರ್ತಿಯಾಗಲು ಸಾರ್ವಜನಿಕರು ಹಾಗೂ ಎಲ್ಲರ ಸಹಕಾರ ಬೇಕು ಎಂದು ಜಿ.ಕೃಷ್ಣಪ್ಪ ಹೇಳಿದ್ದಾರೆ.

ಲೈನ್ ಮ್ಯಾನ್ಗಳ ಕೊರತೆ:
ಬಳಿಕ ಜಿ.ಕೃಷ್ಣಪ್ಪ ಹಾಗೂ ಮುಖಂಡರು ಮೆಸ್ಕಾಂ ಕಚೇರಿಯಲ್ಲಿ ಇಂಜಿನಿಯರ್ಗಳ ಜೊತೆ ಚರ್ಚೆ ನಡೆಸಿದರು. ಸುಳ್ಯದಲ್ಲಿ ಲೈನ್ಮ್ಯಾನ್ಗಳ ಕೊರತೆ ಇದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಹೇಳಿದರು.78 ಮಂದಿ ಲೈನ್ಮ್ಯಾನ್ ಹುದ್ದೆ ಮಂಜೂರಾಗಿದ್ದರೂ ಈಗ ಕೇವಲ 39 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಧಕ್ಕರ್ಧ ಹುದ್ದೆ ಖಾಲಿ ಇದೆ ಎಂದು ಅವರು ಹೇಳಿದರು. ಇಂಧನ ಸಚಿವರ ಗಮನಕ್ಕೆ ತಂದು ಲೈನ್ಮ್ಯಾನ್ ಹುದ್ದೆ ಭರ್ತಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಜಿ.ಕೃಷ್ಣಪ್ಪ ಹೇಳಿದರು.









